ಕರಾವಳಿ ಕಾವಲು ಪಡೆಯ ಹೆಲಿಕಾಪ್ಟರ್‌ ಅಪಘಾತ: ಕಮಾಂಡೆಂಟ್‌ ಸಾವು

7

ಕರಾವಳಿ ಕಾವಲು ಪಡೆಯ ಹೆಲಿಕಾಪ್ಟರ್‌ ಅಪಘಾತ: ಕಮಾಂಡೆಂಟ್‌ ಸಾವು

Published:
Updated:

ಮುಂಬೈ: ಕರಾವಳಿ ಕಾವಲು ಪಡೆಗೆ ಸೇರಿದ ಚೇತಕ್‌ ಹೆಲಿಕಾಪ್ಟರ್‌ ಏಕಾಏಕಿ ಇಳಿದಿದ್ದರಿಂದ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಹಾಯಕ ಕಮಾಂಡೆಂಟ್‌ ಪೆನ್ನಿ ಚೌಧರಿ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ.

ದೈನಂದಿನ ಗಸ್ತು ಕಾರ್ಯದಲ್ಲಿ ತೊಡಗಿದ್ದ ಹೆಲಿಕಾಪ್ಟರ್‌, ಮಾರ್ಚ್‌ 10ರಂದು ರಾಯಗಡ ಜಿಲ್ಲೆಯ ನಂದಗಾಂವ್‌ ಕರಾವಳಿ ತೀರದ ಬಳಿ ಅಪಘಾತಕ್ಕೀಡಾಗಿತ್ತು.

ಗಂಭೀರವಾಗಿ ಗಾಯಗೊಂಡಿದ್ದ ಪೆನ್ನಿ ಚೌಧರಿ ಅವರನ್ನು ನೌಕಾದಳದ ಅಶ್ವಿನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry