ಬಾಂಬ್‌ ಇಟ್ಟಿರುವುದಾಗಿ ಬೆದರಿಕೆ: ದೆಹಲಿಗೆ ವಾಪಸಾದ ವಿಮಾನ

7

ಬಾಂಬ್‌ ಇಟ್ಟಿರುವುದಾಗಿ ಬೆದರಿಕೆ: ದೆಹಲಿಗೆ ವಾಪಸಾದ ವಿಮಾನ

Published:
Updated:
ಬಾಂಬ್‌ ಇಟ್ಟಿರುವುದಾಗಿ ಬೆದರಿಕೆ: ದೆಹಲಿಗೆ ವಾಪಸಾದ ವಿಮಾನ

ನವದೆಹಲಿ: ಬಾಂಬ್‌ ಬೆದರಿಕೆ ಕರೆ ಬಂದ ಕಾರಣ, ಕೋಲ್ಕತ್ತಕ್ಕೆ ಹೊರಟಿದ್ದ ಏರ್‌ ಇಂಡಿಯಾ ವಿಮಾನವನ್ನು ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಇಳಿಸಲಾಯಿತು.

‘ವಿಮಾನವನ್ನು ಆಕಾಶದಲ್ಲಿ ಹೊಡೆದು ಉರುಳಿಸಲಾಗುವುದು’ ಎಂದು ದುಷ್ಕರ್ಮಿಗಳು ಏರ್‌ ಇಂಡಿಯಾದ ಮುಂಬೈ ಗ್ರಾಹಕ ಸೇವಾ ಕೇಂದ್ರಕ್ಕೆ ಮಧ್ಯಾಹ್ನ 2.45ರ ಸುಮಾರಿಗೆ ಬೆದರಿಕೆ ಕರೆ ಮಾಡಿದ್ದರು. ಅಲ್ಲಿನ ಸಿಬ್ಬಂದಿ ಕೂಡಲೇ ವಿಷಯ ತಿಳಿಸಿದ್ದರಿಂದ ಕೋಲ್ಕತ್ತಕ್ಕೆ ಹೊರಟಿದ್ದ ವಿಮಾನವನ್ನು ವಾಪಸ್‌ ಕರೆಸಲಾಯಿತು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಂಬ್‌ ಬೆದರಿಕೆ ಪರಿಶೀಲನಾ ಸಮಿತಿ ವಿಮಾನದಲ್ಲಿದ್ದ 248 ಪ್ರಯಾಣಿಕರು ಮತ್ತು 11 ಸಿಬ್ಬಂದಿಯನ್ನು ಕೆಳಕ್ಕೆ ಇಳಿಸಿ ತಪಾಸಣೆ ನಡೆಸಿತು ಎಂದು ಅವರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry