6

ಓಲಾ, ಉಬರ್‌ ವಿಲೀನ ಮಾತುಕತೆ?

Published:
Updated:
ಓಲಾ, ಉಬರ್‌ ವಿಲೀನ ಮಾತುಕತೆ?

ನವದೆಹಲಿ: ಬಾಡಿಗೆ ಟ್ಯಾಕ್ಸಿ ಸೇವಾ ಸಂಸ್ಥೆಗಳಾದ ಓಲಾ ಮತ್ತು ಉಬರ್‌ಗಳ ವಿಲೀನ ಮಾತುಕತೆಗೆ ಮತ್ತೆ ಚಾಲನೆ ಸಿಕ್ಕಿದೆ.

ಎರಡೂ ಸಂಸ್ಥೆಗಳಲ್ಲಿ ದೊಡ್ಡ ಮೊತ್ತದ ಬಂಡವಾಳ ಹೂಡಿಕೆ ಮಾಡಿರುವ ಜಪಾನಿನ ಹೂಡಿಕೆ ಸಂಸ್ಥೆ ಸಾಫ್ಟ್‌ಬ್ಯಾಂಕ್‌, ಈ ವಿಲೀನ ಪ್ರಕ್ರಿಯೆ ಬೆಂಬಲಿಸಿದೆ. ಈ ವಿದ್ಯಮಾನಗಳ ಬಗ್ಗೆ ಮಾಹಿತಿ ಹೊಂದಿರುವ ಮೂಲಗಳ ಪ್ರಕಾರ, ಉಭಯ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಕಳೆದ ಹಲವಾರು ತಿಂಗಳುಗಳಿಂದ ಈ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ.

ಅಮೆರಿಕದ ಉಬರ್‌ ಸಂಸ್ಥೆಯನ್ನು ಸ್ಥಳೀಯ ಓಲಾ ಸಂಸ್ಥೆ ಸ್ವಾಧೀನಪಡಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ವಿಲೀನದ ನೀಲನಕ್ಷೆಯನ್ನು ಇನ್ನೂ ಸಿದ್ಧಪಡಿಸಬೇಕಾಗಿದೆ. ಇದಕ್ಕೆ ಹಲವು ತಿಂಗಳುಗಳೇ ಬೇಕಾಗಬಹುದು.

‘ತನ್ನ ವಹಿವಾಟು ವಿಸ್ತರಿಸಲು ಓಲಾ ಅವಕಾಶಗಳನ್ನು ಎದುರು ನೋಡುತ್ತಿದೆ. ಸಾಫ್ಟ್‌ಬ್ಯಾಂಕ್‌ ಸೇರಿದಂತೆ ಇತರ ಎಲ್ಲ ಹೂಡಿಕೆದಾರರು ಈ ಮಹತ್ವಾಕಾಂಕ್ಷೆ ನಿಜ ಮಾಡಲು ಬದ್ಧರಾಗಿದ್ದಾರೆ’ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಉಬರ್‌, ದಕ್ಷಿಣ ಏಷ್ಯಾದಲ್ಲಿನ ತನ್ನ ವಹಿವಾಟನ್ನು ಪ್ರತಿಸ್ಪರ್ಧಿ ಸಂಸ್ಥೆ ಗ್ರ್ಯಾಬ್‌ಗೆ ಮಾರಾಟ ಮಾಡಿದ ನಂತರ ಭಾರತದಲ್ಲಿನ ಈ ವಿಲೀನ ಮಾತುಕತೆಗೆ ಹೆಚ್ಚಿನ ಮಹತ್ವ ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry