ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ: ಸಚಿವರು, ಶಾಸಕರ ವೇತನ, ಭತ್ಯೆ ಹೆಚ್ಚಳ

Last Updated 28 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ತಿರುವನಂತಪುರ: ಸಚಿವರು, ಶಾಸಕರು, ಸಭಾಧ್ಯಕ್ಷ, ಉಪಾಧ್ಯಕ್ಷ, ವಿರೋಧ ಪಕ್ಷದ ನಾಯಕರು ಹಾಗೂ ಮುಖ್ಯ ಸಚೇತಕರ ವೇತನ ಮತ್ತು ಭತ್ಯೆಯನ್ನು ಹೆಚ್ಚಿಸುವ ಮಸೂದೆಗೆ ಕೇರಳ ವಿಧಾನಸಭೆ ಬುಧವಾರ ಅನುಮೋದನೆ ನೀಡಿದೆ.

ಏಪ್ರಿಲ್‌ 1ರಿಂದ ವೇತನ ಪರಿಷ್ಕರಣೆ ಜಾರಿಗೆ ಬರಲಿದ್ದು, ಶಾಸಕರ ವೇತನ ₹39,500ರಿಂದ ₹70ಸಾವಿರಕ್ಕೆ ಹೆಚ್ಚಲಿದೆ. ಸಚಿವರು ಮತ್ತು ಇತರರ ವೇತನ ₹55 ಸಾವಿರದಿಂದ ₹90 ಸಾವಿರಕ್ಕೆ ಹೆಚ್ಚಲಿದೆ.

ನಿವೃತ್ತ ನ್ಯಾಯಮೂರ್ತಿ ಜೆ.ಎಂ.ಜೇಮ್ಸ್‌ ಆಯೋಗದ ಶಿಫಾರಸುಗಳ ಅನ್ವಯ ವೇತನ ಪರಿಷ್ಕರಣೆಯ ಮಸೂದೆಯನ್ನು ರೂಪಿಸಲಾಗಿತ್ತು. ಈ ಹಿಂದೆ 2012ರಲ್ಲಿ ವೇತನ ಪರಿಷ್ಕರಣೆ ಮಾಡಲಾಗಿತ್ತು.

ಸಚಿವರ ಕ್ಷೇತ್ರ ಭತ್ಯೆಯನ್ನು ₹12 ಸಾವಿರದಿಂದ ₹40 ಸಾವಿರಕ್ಕೆ ಹಾಗೂ ಶಾಸಕರ ಕ್ಷೇತ್ರ ಭತ್ಯೆಯನ್ನು ₹12ಸಾವಿರ ದಿಂದ ₹25ಸಾವಿರಕ್ಕೆ ಹೆಚ್ಚಿಸಲಾಗಿದೆ.

ಜತೆಗೆ ರಾಜ್ಯ ಮತ್ತು ಹೊರರಾಜ್ಯದಲ್ಲಿನ ವಿಧಾನಸಭೆ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ವಿಮಾನ ಪ್ರವಾಸಕ್ಕೆ ಶಾಸಕರಿಗೆ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಪ್ರತಿ ವರ್ಷ ₹50 ಸಾವಿರದವರೆಗೆ ಖರ್ಚು ಮಾಡಬಹುದು.  ವೇತನ ಪರಿಷ್ಕರಣೆಯಿಂದ ರಾಜ್ಯದ ಬೊಕ್ಕಸಕ್ಕೆ ಪ್ರತಿ ವರ್ಷ ₹5.25 ಕೋಟಿ ಹೊರೆಯಾಗಲಿದೆ.

ಹಾಗೆಯೇ ಮಾಜಿ ಶಾಸಕರ ಪಿಂಚಣಿಯನ್ನು ₹1ಸಾವಿರ ಹೆಚ್ಚಿಸಲು ಅನುಮೋದನೆ ನೀಡಲಾಯಿತು. ಇದರಿಂದ ಗರಿಷ್ಠ ಪಿಂಚಣಿಯನ್ನು ಪ್ರತಿ ತಿಂಗಳಿಗೆ ಈಗಿರುವ ₹35ಸಾವಿರದಿಂದ ₹50 ಸಾವಿರಕ್ಕೆ ಹೆಚ್ಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT