33 ಸಾವಿರ ಗಡಿ ಇಳಿದ ಸೂಚ್ಯಂಕ

7
ವರ್ಷದಲ್ಲಿ ಸಂಪತ್ತು ₹20.70 ಲಕ್ಷ ಕೋಟಿ ಹೆಚ್ಚಳ

33 ಸಾವಿರ ಗಡಿ ಇಳಿದ ಸೂಚ್ಯಂಕ

Published:
Updated:
33 ಸಾವಿರ ಗಡಿ ಇಳಿದ ಸೂಚ್ಯಂಕ

ಮುಂಬೈ: 2017–18ನೇ ಹಣಕಾಸು ವರ್ಷದ ಕೊನೆಯ ವಹಿವಾಟು ದಿನವಾದ ಬುಧವಾರ, ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ತೀವ್ರ ಏರಿಳಿತ ದಾಖಲಿಸಿತು.

ಸೂಚ್ಯಂಕವು ದಿನದ ಅಂತ್ಯಕ್ಕೆ 206 ಅಂಶಗಳಿಗೆ ಎರವಾಗಿ 33 ಸಾವಿರ ಅಂಶಗಳ ಗಡಿಯಿಂದ ಕೆಳಗೆ ಕುಸಿಯಿತು. ಒಂದು ವರ್ಷದಲ್ಲಿ ಸೂಚ್ಯಂಕ ಶೇ 11.30ರಷ್ಟು ಏರಿಕೆ ದಾಖಲಿಸಿದೆ.

ಜಾಗತಿಕ ಷೇರುಪೇಟೆಯಲ್ಲಿನ ತೀವ್ರ ಏರಿಳಿತ, ಮಾರ್ಚ್‌ ತಿಂಗಳಾಂತ್ಯದ ವಾಯಿದಾ ವಹಿವಾಟು ಅಂತ್ಯದ ಕಾರಣಕ್ಕೆ ಪೇಟೆಯಲ್ಲಿ ಮಾರಾಟ ಒತ್ತಡ ಕಂಡುಬಂದಿತು. ವಿತ್ತೀಯ ಕೊರತೆ ಹೆಚ್ಚಳವೂ ಖರೀದಿ ಉತ್ಸಾಹಕ್ಕೆ ಅಡ್ಡಿಪಡಿಸಿತು.

ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ ಕೂಡ 70 ಅಂಶಗಳಿಗೆ ಎರವಾಯಿತು. ಈ ವರ್ಷ ‘ನಿಫ್ಟಿ’ 939 ಅಂಶಗಳಷ್ಟು (ಶೇ 10.25) ಏರಿಕೆ ಕಂಡಿದೆ.

ಸಂಪತ್ತು ವೃದ್ಧಿ: ಮಾರುಕಟ್ಟೆ ಮೌಲ್ಯದಲ್ಲಿ ಹೂಡಿಕೆದಾರರ ಸಂಪತ್ತು ಈ ಹಣಕಾಸು ವರ್ಷದಲ್ಲಿ ₹ 20.70 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ.

ಕುಸಿತ: ಟಾಟಾ ಸ್ಟೀಲ್‌ (ಶೇ 2.25) ಮತ್ತು ಭಾರ್ತಿ ಏರ್‌ಟೆಲ್‌ (ಶೇ 3.05) ಷೇರುಗಳು ಹೆಚ್ಚಿನ ನಷ್ಟ ಕಂಡವು. ಅದಾನಿ ಪೋರ್ಟ್ಸ್‌, ಸನ್‌ ಫಾರ್ಮಾ, ಬಜಾಜ್‌ ಆಟೊ, ಐಸಿಐಸಿಐ ಬ್ಯಾಂಕ್‌, ಆರ್‌ಐಎಲ್, ಇನ್ಫೊಸಿಸ್‌, ಎಸ್‌ಬಿಐ, ಐಟಿಸಿ ಷೇರುಗಳು ಬೆಲೆ ಕುಸಿತ ದಾಖಲಿಸಿದವು.

ಲಾಭ: ವಿಪ್ರೊ (ಶೇ 3.27), ಕೋಲ್‌ ಇಂಡಿಯಾ (ಶೇ 2.94) ನೇತೃತ್ವದಲ್ಲಿ ಹೀರೊ ಮೋಟೊಕಾರ್ಪ್‌, ಕೋಟಕ್‌ ಬ್ಯಾಂಕ್‌, ಯೆಸ್‌ ಬ್ಯಾಂಕ್‌, ಮಾರುತಿ ಸುಜುಕಿ ಷೇರುಗಳು ಲಾಭ ಬಾಚಿಕೊಂಡವು.

ಎರಡು ದಿನ ಬಿಡುವು: ಮಹಾವೀರ ಜಯಂತಿ ಮತ್ತು ಗುಡ್‌ ಫ್ರೈಡೆ  ಅಂಗವಾಗಿ ಕ್ರಮವಾಗಿ ಗುರುವಾರ ಮತ್ತು ಶುಕ್ರವಾರ ಷೇರುಪೇಟೆ ಕಾರ್ಯನಿರ್ವಹಿಸುವುದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry