ಮೀನುಗಾರಿಕೆ ಪರವಾನಗಿ ತಿದ್ದುಪಡಿಗೆ ತಡೆ

7

ಮೀನುಗಾರಿಕೆ ಪರವಾನಗಿ ತಿದ್ದುಪಡಿಗೆ ತಡೆ

Published:
Updated:
ಮೀನುಗಾರಿಕೆ ಪರವಾನಗಿ ತಿದ್ದುಪಡಿಗೆ ತಡೆ

ಬೆಂಗಳೂರು: ಬೆಸ್ತ ಸಮುದಾಯಕ್ಕೆಶೇ 90ರಷ್ಟು ಮೀನುಗಾರಿಕೆ ಪರವಾನಗಿ ನೀಡಲು ಸರ್ಕಾರ ಮಾಡಿದ್ದ ತಿದ್ದುಪಡಿಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಈ ಸಂಬಂಧ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಮೀನು ಉತ್ಪಾದಕರ ಮತ್ತು ಮಾರಾಟಗಾರರ ಸಹಕಾರ ಸಂಘ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿ, ಪ್ರತಿವಾದಿಗಳಾದ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.

ಅರ್ಜಿದಾರರ ಪರ ವಕೀಲ ಶ್ರೀನಿವಾಸ್ ವಾದ ಮಂಡಿಸಿ, ‘ಮೀನುಗಾರಿಕಾ ಸಚಿವರ ಪ್ರಭಾವಕ್ಕೆ ಒಳಗಾಗಿ ಹಾಗೂ ಕೆಲವು ಶಾಸಕರ ಮನವಿ ಮೇರೆಗೆ ಮುಖ್ಯಮಂತ್ರಿಗಳ ಸೂಚನೆಯಂತೆ ಮಾರ್ಗಸೂಚಿ ನಿಯಮಕ್ಕೆ ತಿದ್ದುಪಡಿ ಮಾಡಲಾಗಿದೆ. ಇದರಿಂದ ಈಗಾಗಲೇ ಮೀನುಗಾರಿಕೆ ಸೊಸೈಟಿಗಳಲ್ಲಿ ಇರುವ ಪರಿಶಿಷ್ಟ ಜಾತಿ, ಪಂಗಡ, ಕ್ರೈಸ್ತರು, ತಿಗಳರು, ಮುಸ್ಲಿಮರು ಮತ್ತು ಇತರೆ ಹಿಂದುಳಿದ ವರ್ಗದವರಿಗೆ ಅನ್ಯಾಯವಾಗಲಿದೆ’ ಎಂದು ಆಕ್ಷೇಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry