ಚೆಂಡು ವಿರೂಪ ಪ್ರಕರಣ: ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ಡೇವಿಡ್‌ ವಾರ್ನರ್‌

7

ಚೆಂಡು ವಿರೂಪ ಪ್ರಕರಣ: ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ಡೇವಿಡ್‌ ವಾರ್ನರ್‌

Published:
Updated:
ಚೆಂಡು ವಿರೂಪ ಪ್ರಕರಣ: ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ಡೇವಿಡ್‌ ವಾರ್ನರ್‌

ಬೆಂಗಳೂರು: ಚೆಂಡು ವಿರೂಪಗೊಳಿಸಿದ ಪ್ರಕರಣದಿಂದಾಗಿ ಈ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಚೆಂಡು ವಿರೂಪಗೊಳಿಸಿರುವ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಮೌನ ಮುರಿದಿರುವ ವಾರ್ನರ್‌, ‘ನನ್ನ ಪಾಲಿನ ತಪ್ಪಿಗೆ ಕ್ಷಮೆಯಾಚಿಸುತ್ತೇನೆ ಹಾಗೂ ಅದರ ಹೊಣೆಯನ್ನು ತೆಗೆದುಕೊಳ್ಳುತ್ತೇನೆ’ ಎಂದು ಅಭಿಮಾನಿಗಳನ್ನು ಉದ್ದೇಶಿಸಿ ಬರೆದುಕೊಂಡಿದ್ದಾರೆ.

‘ತಪ್ಪಿನಿಂದಾಗಿ ಕ್ರೀಡೆ ಮತ್ತು ಅಭಿಮಾನಿಗಳಿಗೆ ಉಂಟು ಮಾಡಿರುವ ಆಘಾತವನ್ನು ನಾನು ಬಲ್ಲೆ. ನಾವೆಲ್ಲರೂ ಪ್ರೀತಿಸುವ ಹಾಗೂ ನಾನು ಚಿಕ್ಕಂದಿನಿಂದಲೂ ಬಹಳ ಇಷ್ಟಪಡುವ ಕ್ರಿಕೆಟ್‌ ಆಟದ ಮೇಲೆ ಇದೊಂದು ಕಲೆಯುಂಟು ಮಾಡಿದಂತೆ. ನಾನೀಗ ಕೆಲ ಕಾಲ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಕಳೆಯಲು ಬಯಸುತ್ತಿದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ನನ್ನ ಮಾತುಗಳನ್ನು ಆಲಿಸಲಿದ್ದೀರಿ’ ಎಂದು ಗುರುವಾರ ಪ್ರಕಟಿಸಿದ್ದಾರೆ.

ಸದ್ಯ ವಾರ್ನರ್‌ ಸಿಡ್ನಿ ಕಡೆಗೆ ಮರಳುತ್ತಿದ್ದಾರೆ. ಬುಧವಾರ ಕ್ರಿಕೆಟ್‌ ಆಸ್ಟ್ರೇಲಿಯಾ(ಸಿಎ) ಕೂಡಾ ಇವರಿಗೆ 1 ವರ್ಷದ ನಿಷೇಧ ಹೇರಿತ್ತು.

ಇನ್ನಷ್ಟು:  ಸ್ಮಿತ್, ವಾರ್ನರ್‌ಗೆ ‘ಡಬಲ್’ ಶಿಕ್ಷೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry