7

ಕೆ.ರತ್ನಪ್ರಭಾ ಸೇವಾ ಅವಧಿ 3 ತಿಂಗಳು ವಿಸ್ತರಣೆಗೆ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಅನುಮತಿ

Published:
Updated:
ಕೆ.ರತ್ನಪ್ರಭಾ ಸೇವಾ ಅವಧಿ 3 ತಿಂಗಳು ವಿಸ್ತರಣೆಗೆ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಅನುಮತಿ

ನವದೆಹಲಿ: ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರ ಸೇವಾ ಅವಧಿಯನ್ನು ಮತ್ತೆ ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ.

ಕೆ.ರತ್ನಪ್ರಭಾ ಅವರ ಅವಧಿಯನ್ನು 2018ರ ಜೂನ್ 30ರವರೆಗೆ ವಿಸ್ತರಿಸಲು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಅನುಮತಿ ನೀಡಿದೆ.‌ ರತ್ನಪ್ರಭಾ ಅವರು ಇದೇ 31ಕ್ಕೆ ವಯೋನಿವೃತ್ತಿಯಾಗಬೇಕಿತ್ತು.

ರತ್ನಪ್ರಭಾ ಅವರ ಸೇವಾ ಅವಧಿಯನ್ನು ವಿಸ್ತರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.  ರಾಜ್ಯ ವಿಧಾನಸಭೆಯ ಚುನಾವಣೆ ಸಮೀಪಿಸಿದ್ದು, ಚುನಾವಣಾ ಕಾರ್ಯವನ್ನು ಸಮರ್ಪಕವಾಗಿ ನಡೆಸುವ ಉದ್ದೇಶದಿಂದ ಅವರ ಸೇವಾ ಅವಧಿ ವಿಸ್ತರಿಸುವಂತೆ ಕೋರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry