ನಿಯಮ ಉಲ್ಲಂಘನೆ: ಐಸಿಐಸಿಐ ಬ್ಯಾಂಕ್‌ಗೆ ₹ 59 ದಂಡ

5

ನಿಯಮ ಉಲ್ಲಂಘನೆ: ಐಸಿಐಸಿಐ ಬ್ಯಾಂಕ್‌ಗೆ ₹ 59 ದಂಡ

Published:
Updated:
ನಿಯಮ ಉಲ್ಲಂಘನೆ: ಐಸಿಐಸಿಐ ಬ್ಯಾಂಕ್‌ಗೆ ₹ 59 ದಂಡ

ಮುಂಬೈ : ಸಾಲಪತ್ರಗಳ ಮಾರಾಟ ನಿಯಮ ಉಲ್ಲಂಘಿಸಿರುವುದಕ್ಕೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌, ಖಾಸಗಿ ವಲಯದ ಅತಿದೊಡ್ಡ ಹಣಕಾಸು ಸಂಸ್ಥೆಯಾಗಿರುವ ಐಸಿಐಸಿಐ ಬ್ಯಾಂಕ್‌ಗೆ ₹ 59 ಕೋಟಿ ದಂಡ ವಿಧಿಸಿದೆ.

ಒಂದು ನಿಗದಿತ ಅವಧಿಗೆ ಮೀಸಲಿರಿಸಿದ ಸಾಲಪತ್ರಗಳ ನೇರ ಮಾರಾಟಕ್ಕೆ ಸಂಬಂಧಿಸಿದಂತೆ ಇರುವ ನಿಯಮಗಳನ್ನು ಐಸಿಐಸಿಐ ಬ್ಯಾಂಕ್‌ ಪಾಲನೆ ಮಾಡಿಲ್ಲ. ಈ ಕಾರಣಕ್ಕಾಗಿ ಮಾರ್ಚ್‌ 26ರಂದು ದಂಡ ವಿಧಿಸಿ, ಆದೇಶ ಹೊರಡಿಸಲಾಗಿದೆ ಎಂದು ಆರ್‌ಬಿಐನ ಪ್ರಕಟಣೆ ತಿಳಿಸಿದೆ.

1949ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಅನ್ವಯ ಆರ್‌ಬಿಐ ನೀಡಿರುವ ನಿರ್ದೇಶನಗಳನ್ನು ಪಾಲಿಸಲು ವಿಫಲವಾಗುವ ಬ್ಯಾಂಕ್‌ಗಳ ವಿರುದ್ಧ ಕ್ರಮ ಜರುಗಿಸುವ ಅಧಿಕಾರವನ್ನು ಆರ್‌ಬಿಐ ಹೊಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry