ಏಪ್ರಿಲ್‌ 7 ರಿಂದ 2018ರ ಐಪಿಎಲ್‌: ಸನ್‌ರೈಸರ್ಸ್‌ ತಂಡ ಮುನ್ನಡೆಸಲಿರುವ ಕೇನ್‌ ವಿಲಿಯಮ್ಸನ್‌

7

ಏಪ್ರಿಲ್‌ 7 ರಿಂದ 2018ರ ಐಪಿಎಲ್‌: ಸನ್‌ರೈಸರ್ಸ್‌ ತಂಡ ಮುನ್ನಡೆಸಲಿರುವ ಕೇನ್‌ ವಿಲಿಯಮ್ಸನ್‌

Published:
Updated:
ಏಪ್ರಿಲ್‌ 7 ರಿಂದ 2018ರ ಐಪಿಎಲ್‌: ಸನ್‌ರೈಸರ್ಸ್‌ ತಂಡ ಮುನ್ನಡೆಸಲಿರುವ ಕೇನ್‌ ವಿಲಿಯಮ್ಸನ್‌

ನವದೆಹಲಿ: ಏಪ್ರಿಲ್‌ 7 ರಿಂದ ಆರಂಭವಾಗಲಿರುವ ಐಪಿಎಲ್‌ 11ನೇ ಆವೃತ್ತಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ನ್ಯೂಜಿಲೆಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಮುನ್ನಡೆಸಲಿದ್ದಾರೆ.

ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೀವ್ ಸ್ಮಿತ್ ಮತ್ತು ಡೇವಿಡ್‌ ವಾರ್ನರ್‌ಗೆ ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿ ಒಂದು ವರ್ಷದ ನಿಷೇಧ ವಿಧಿಸಿದ ಬೆನ್ನಲ್ಲೇ, ಬಿಸಿಸಿಐ ಕೂಡ ಸ್ಮಿತ್, ವಾರ್ನರ್‌ ಐಪಿಎಲ್‌ ಪಂದ್ಯಗಳಲ್ಲಿ ಆಡದಂತೆ ನಿಷೇಧ ಹೇರಿತ್ತು.

ಐಪಿಎಲ್‌ ಪಂದ್ಯಾವಳಿಯಲ್ಲಿ ಸ್ಟೀವ್‌ ಸ್ಮಿತ್‌, ವಾರ್ನರ್‌ ಕ್ರಮವಾಗಿ ರಾಜಸ್ಥಾನ ರಾಯಲ್ಸ್‌ ಹಾಗೂ ಸನ್‌ರೈಸರ್ಸ್‌ ತಂಡಗಳ ನಾಯಕರಾಗಿದ್ದರು. ಸದ್ಯ ಸ್ಮಿತ್‌ ರಾಯಲ್ಸ್‌ ತಂಡದ ನಾಯಕತ್ವದಿಂದ ಸೋಮವಾರವೇ ಹಿಂದೆ ಸರಿದಿದ್ದರು. ಆ ಸ್ಥಾನಕ್ಕೆ ಅಜಿಂಕ್ಯಾ ರಹಾನೆ ಅವರನ್ನು ನೇಮಿಸಲಾಗಿತ್ತು.

ಉಳಿದಂತೆ ಸನ್‌ರೈಸರ್ಸ್‌ ತಂಡದ ನಾಯಕನಾಗಿ ಕೇನ್‌ ವಿಲಿಯಮ್ಸನ್‌ ಆಯ್ಕೆಯಾಗಿದ್ದು, ಈ ವಿಚಾರವನ್ನು ತಂಡದ ಸಿಇಒ ಕೆ.ಷಣ್ಮುಗಂ ಅವರು ಗುರುವಾರ ಖಚಿತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry