'ದೇಹದ ತೂಕ ಕಡಿಮೆ ಮಾಡಿ': ರೇಣುಕಾ ಚೌಧರಿಗೆ ವೆಂಕಯ್ಯ ನಾಯ್ಡು ಸಲಹೆ

7

'ದೇಹದ ತೂಕ ಕಡಿಮೆ ಮಾಡಿ': ರೇಣುಕಾ ಚೌಧರಿಗೆ ವೆಂಕಯ್ಯ ನಾಯ್ಡು ಸಲಹೆ

Published:
Updated:
'ದೇಹದ ತೂಕ ಕಡಿಮೆ ಮಾಡಿ': ರೇಣುಕಾ ಚೌಧರಿಗೆ ವೆಂಕಯ್ಯ ನಾಯ್ಡು ಸಲಹೆ

ನವದೆಹಲಿ: ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಅವರಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಉಪದೇಶವೊಂದನ್ನು ನೀಡಿದ್ದಾರೆ. ರಾಜ್ಯಸಭೆಯಲ್ಲಿ ಕಾಲಾವಧಿ ಪೂರ್ತಿಗೊಳಿಸಿದ ಸದಸ್ಯರಿಗೆ ವಿದಾಯ ಹೇಳುವ ಕಾರ್ಯಕ್ರಮದಲ್ಲಿ ನಾಯ್ಡು, ರೇಣುಕಾ ಚೌಧರಿ ಅವರಿಗೆ ಈ ಸಲಹೆ ಕೊಟ್ಟಿದ್ದಾರೆ.

ಈ ಕಾರ್ಯಕ್ರಮದಲ್ಲಿ ವಿದಾಯ ಭಾಷಣ ಮಾಡಿದ 63ರ ಹರೆಯದ ರೇಣುಕಾ ತಮ್ಮ ದೇಹದ ತೂಕದ ಬಗ್ಗೆಯೂ ಹೇಳಿದ್ದಾರೆ. ನಾನಿಷ್ಟು ದಪ್ಪ ಆಗುವುದಕ್ಕಿಂತ ಮುನ್ನವೇ ವೆಂಕಯ್ಯ ನಾಯ್ಡು ಅವರಿಗೆ ನನ್ನ ಪರಿಚಯವಿದೆ. ನನ್ನ ದೇಹದ ತೂಕ ಬಗ್ಗೆ ಹಲವರಿಗೆ ಆತಂಕವಿದೆ. ಸಾಮಾಜಿಕ ಕಾರ್ಯಗಳನ್ನು ಮಾಡಬೇಕಾದರೆ ಈ ದೇಹದ ತೂಕ ಕಡಿಮೆ ಮಾಡಬೇಕಿದೆ ಎಂದು ಹೇಳಿದ್ದರು.

ರೇಣುಕಾ ಅವರ ಮಾತು ಮುಗಿದ ಕೂಡಲೇ ಮಾತು ಆರಂಭಿಸಿದ ನಾಯ್ಡು, ನೀವು ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಬೇಕು ಎಂಬುದು ನನ್ನ ಸಲಹೆ. ಅದರ ಜತೆಗೇ ಪಕ್ಷದ ತೂಕವನ್ನು ಹೆಚ್ಚಿಸಲು ಗಮನ ಹರಿಸಬೇಕು ಎಂದು ಹೇಳಿದರು. ಅಲ್ಲಿರುವ ಕಾಂಗ್ರೆಸ್ ಸದಸ್ಯರ ಸಂಖ್ಯೆಯನ್ನುದ್ದೇಶಿಸಿ ನಾಯ್ಡು ಆ ಮಾತು ಹೇಳಿದ್ದರು. ಇದಕ್ಕೆ ಉತ್ತರಿಸಿದ ರೇಣುಕಾ, ಕಾಂಗ್ರೆಸ್‍ಗೆ ಈಗೇನೂ ಸಮಸ್ಯೆ ಇಲ್ಲ ಎಂದಾಗ ಸಭೆಯಲ್ಲಿ ನಗು ಉಕ್ಕಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry