ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ವಿರುದ್ಧ 'ಭೂ ಹಗರಣ' ಆರೋಪ

7

ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ವಿರುದ್ಧ 'ಭೂ ಹಗರಣ' ಆರೋಪ

Published:
Updated:
ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ವಿರುದ್ಧ 'ಭೂ ಹಗರಣ' ಆರೋಪ

ನವದೆಹಲಿ: ದೆಹಲಿಯಲ್ಲಿ ₹89 ಕೋಟಿ ಮೌಲ್ಯದ ಜಮೀನನ್ನು ಕಾಂಗ್ರೆಸ್‍ನ ಹಿರಿಯ ನಾಯಕ, ನ್ಯಾಯವಾದಿ ಮತ್ತು ಕೇಂದ್ರ ಮಾಜಿ ಸಚಿವ ಕಪಿಲ್ ಸಿಬಲ್ ಕಡಿಮೆ ಬೆಲೆಗೆ ಖರೀದಿಸಿ ಅವ್ಯವಹಾರ ನಡೆಸಿದ್ದಾರೆ ಎಂದು ಬಿಜೆಪಿ ನಾಯಕಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿಸಿದ್ದಾರೆ. ನವದೆಹಲಿಯ ನಗರಸಭೆ ವ್ಯಾಪ್ತಿಯಲ್ಲಿರುವ ಈ ಭೂಮಿಯನ್ನು ಸಿಬಲ್ ಅವರು ₹1 ಲಕ್ಷಕ್ಕೆ ಖರೀದಿಸಿದ್ದಾರೆ ಎಂದು  ದಕ್ಷಿಣ ಆಫ್ರಿಕಾದ ಡೈಲಿ ಮೆವರಿಕ್ ಎಂಬ ಪತ್ರಿಕೆ ವರದಿಯನ್ನು ಆಧಾರವಾಗಿರಿಸಿ ಸ್ಮೃತಿ ಈ ಆರೋಪ ಮಾಡಿದ್ದಾರೆ.

ಸಿಬಲ್ ಮತ್ತು ಅವರ ಪತ್ನಿ ಪಾಲುದಾರಿಕೆ ಹೊಂದಿರುವ ಗ್ರ್ಯಾಂಡ್ ಕಾಸ್ಟೆಲೊ ಪ್ರೈವೆಟ್ ಲಿಮಿಟೆಡ್ ಕಂಪನಿ ಈ ಜಮೀನು ಖರೀದಿಸಿತ್ತು. ಒಂದು ಲಕ್ಷ ರೂಪಾಯಿಗೆ ₹89 ಕೋಟಿ ಮೌಲ್ಯದ ಖರೀದಿಸಿದರ ಹಿಂದೆ ಅಕ್ರಮ ನಡೆದಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಂತೆಯೇ ಇರುವ ಹಗರಣ ಇದಾಗಿದೆ ಎಂದು ಬಿಜೆಪಿ ಆರೋಪಿಸಿದೆ. ದಕ್ಷಿಣ ಆಫ್ರಿಕಾ ಸರ್ಕಾರದೊಂದಿಗೆ ಆಪ್ತರಾಗಿರುವ ಭಾರತದ ಉದ್ಯಮಿಗಳಾಗಿದ್ದಾರೆ ಗುಪ್ತಾ ಬ್ರದರ್ಸ್. 2010ರಿಂದ ಪೀಯುಷ್ ಗೋಯಲ್ ಮತ್ತು ಗುಪ್ತಾ ಬ್ರದರ್ಸ್ ವೈಯಕ್ತಿಕ ಮತ್ತು ವ್ಯಾವಹಾರಿಕ ರೀತಿಯಲ್ಲಿ ಸಂಬಂಧ ಹೊಂದಿದ್ದಾರೆ. ಪೀಯುಷ್ ಅವರ ಮೂಲಕ ಸಿಬಲ್ ಗುಪ್ತಾ ಬ್ರದರ್ಸ್ ಜತೆ ಪರಿಚಯ ಹೊಂದಿದ್ದಾರೆ.

2011ರಲ್ಲಿ ಭಾರತ-ಶ್ರೀಲಂಕಾ ವಿಶ್ವಕಪ್ ಕ್ರಿಕೆಟ್ ಫೈನಲ್ ವೀಕ್ಷಣೆಗಾಗಿ ಕಪಿಲ್ ಸಿಬಲ್, ಪೀಯುಷ್ ಗೋಯಲ್, ಗುಪ್ತಾ ಬ್ರದರ್ಸ್ ಮತ್ತು ಅವರ ಕುಟುಂಬ ಸದಸ್ಯರು ಚಾರ್ಟೆಡ್ ವಿಮಾನದಲ್ಲಿ ದೆಹಲಿಯಿಂದ ಮುಂಬೈಗೆ ಬಂದಿದ್ದರು.ಈ ವಿಮಾನ ಪ್ರಯಾಣದ ಟಿಕೆಟ್ ಬುಕ್ ಮಾಡಿದ್ದು ಗುಪ್ತಾ ಬ್ರದರ್ಸ್ ಕಂಪನಿಯಾಗಿತ್ತು. ಪೀಯುಷ್ ಜತೆ ವೈಯಕ್ತಿಕ ಸಂಬಂಧ ಮಾತ್ರ ಇದೆ ಎಂದು ಈ ಹಿಂದೆ ಸಿಬಲ್ ಹೇಳಿದ್ದರು. ಆದರೆ ಅವರಿಗೆ ವ್ಯಾವಹಾರಿಕ ಸಂಬಂಧವೂ ಇದೆ ಎಂದು ಬಿಜೆಪಿ ವಾದಿಸುತ್ತಿದೆ.

ಗುಪ್ತಾ ಬ್ರದರ್ಸ್‍ಗಾಗಿ ದಕ್ಷಿಣ ಆಫ್ರಿಕಾದಲ್ಲಿ ಹಣ ಹೊಂದಿಸುವುದು ಪೀಯುಷ್ ಅವರ ನಿಯಂತ್ರಣದಲ್ಲಿರುವ ವರ್ಲ್ಡ್ಸ್ ವಿಂಡೊ ಇಂಪೆಕ್ಸ್ ಇಂಡಿಯಾ ಪ್ರೈ. ಲಿಮಿಟೆಡ್ ಆಗಿದೆ. ಗ್ರ್ಯಾಂಡ್ ಕಾಸ್ಟೆಲೊ ಪ್ರೈವೆಟ್ ಲಿಮಿಟೆಡ್ ಕಂಪನಿಗೆ ವರ್ಲ್ಡ್ಸ್ ವಿಂಡೊ ಇಂಪೆಕ್ಸ್ ಇಂಡಿಯಾ ಪ್ರೈ.ಲಿಮಿಟೆಡ್ (Worlds Window Impex India Pvt. Ltd) ಕಂಪನಿಯ ಸಹಾಯ ಹಸ್ತವಿದೆ. ಗ್ರ್ಯಾಂಡ್ ಕಾಸ್ಟಿಲೊದಲ್ಲಿ 2017 ಮಾರ್ಚ್ ತಿಂಗಳಲ್ಲಿ ₹1 ಲಕ್ಷ  ರೂಪಾಯಿ ನೀಡಿ ಕಪಿಲ್ ಸಿಬಲ್ ಮತ್ತು ಪತ್ನಿ ಪ್ರೊಮಿಲಾ ಸಿಬಲ್ ಶೇ.50 ಶೇರುಗಳನ್ನು ಖರೀದಿಸಿದ್ದರು.

2013-14ರ ಕಾಲಾವಧಿಯಲ್ಲಿ ಈ ಕಂಪನಿಗೆ ಯಾವುದೇ ವ್ಯವಹಾರಗಳು ಇರಲಿಲ್ಲ. ಈ ವೇಳೆ ₹45,21 ಕೋಟಿ ಮೌಲ್ಯದ ಜಮೀನನ್ನು ದೆಹಲಿಯಲ್ಲಿ ಖರೀದಿಸಿರುವ ಬಗ್ಗೆ ದಾಖಲೆಗಳಿವೆ. 2014-2015ರಲ್ಲಿ ಇದೇ ಕಂಪನಿ ಖರೀದಿಸಿದ ಭೂಮಿಯ ಮಾರಾಟ ಬೆಲೆಯನ್ನು ಸರ್ಕಾರ ನಿಗದಿಪಡಿಸಿದ ಬೆಲೆಗೆ ನಿಶ್ಚಯಿಸಿತು.  ದಾಖಲೆಗಳಲ್ಲಿ ಜಮೀನಿನ ಮೌಲ್ಯ ₹89 ಕೋಟಿಯಾಗಿ ಏರಿಕೆ ಮಾಡಲಾಯಿತು. ಮುಂದಿನ ಆರ್ಥಿಕ ವರ್ಷದಲ್ಲಿ ಜಮೀನಿನ ಬೆಲೆಯನ್ನು ಕಡಿಮೆ ಮಾಡಿ, ಮೊದಲಿನ ಬೆಲೆಯನ್ನೇ ದಾಖಲೆ ಪತ್ರಗಳಲ್ಲಿ ನಮೂದಿಸಲಾಯಿತು.

ಜಮೀನಿನ ಬೆಲೆ ಕಡಿಮೆ ಮಾಡಿದ್ದಾಗ ಸಿಬಲ್ ಮತ್ತು ಅವರ ಪತ್ನಿ ಕಂಪನಿ ಖರೀದಿ ಮಾಡಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಸುದ್ದಿ ಮಾಡಿದ್ದ OPINDIA ಎಂಬ ವೆಬ್‍ಸೈಟ್ ಈ ಬಗ್ಗೆ ಸಿಬಲ್ ಅವರನ್ನು ಪ್ರಶ್ನಿಸಿತ್ತು. ಆದರೆ ಇದಕ್ಕೆ ಸಿಬಲ್ ಉತ್ತರಿಸಿರಲಿಲ್ಲ.

ಈ ರೀತಿ ವಂಚನೆ ನಡೆಸುವುದು ಕಾಂಗ್ರೆಸ್‍ನ ಸ್ವಭಾವವಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕೆಂದು ಸ್ಮೃತಿ ಒತ್ತಾಯಿಸಿದ್ದಾರೆ.

ಆರೋಪ ನಿರಾಧಾರ: ಸಿಬಲ್

ಸ್ಮೃತಿ ಇರಾನಿ ಮಾಡಿರುವ ಆರೋಪ ನಿರಾಧಾರವಾಗಿದೆ. ಸಿಬಿಎಸ್‍ಇ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಎಂದು ಸಿಬಲ್ ಪ್ರತಿಕ್ರಿಯಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry