ಮಣಿಪಾಲ್‌ ಹಾಸ್ಪಿಟಲ್‌ನಲ್ಲಿ ಫೋರ್ಟೀಸ್‌ನ ಆಸ್ಪತ್ರೆ ವಿಲೀನ

7

ಮಣಿಪಾಲ್‌ ಹಾಸ್ಪಿಟಲ್‌ನಲ್ಲಿ ಫೋರ್ಟೀಸ್‌ನ ಆಸ್ಪತ್ರೆ ವಿಲೀನ

Published:
Updated:
ಮಣಿಪಾಲ್‌ ಹಾಸ್ಪಿಟಲ್‌ನಲ್ಲಿ ಫೋರ್ಟೀಸ್‌ನ ಆಸ್ಪತ್ರೆ ವಿಲೀನ

ನವದೆಹಲಿ: ಫೋರ್ಟಿಸ್‌ ಹೆಲ್ತ್‌ಕೇರ್‌ ಲಿಮಿಟೆಡ್‌ನ (ಎಫ್‌ಎಚ್‌ಎಲ್‌) ಆಸ್ಪತ್ರೆಯ ವಹಿವಾಟನ್ನು ಮಣಿಪಾಲ್‌ ಹಾಸ್ಪಿಟಲ್‌ ಎಂಟರ್‌ಪ್ರೈಸಸ್‌ ಪ್ರೈವೇಟ್‌ ಲಿಮಿಟೆಡ್ ಮತ್ತು ಟಿಪಿಜಿ ಕ್ಯಾಪಿಟಲ್‌ ಸ್ವಾಧೀನಪಡಿಸಿಕೊಳ್ಳಲಿವೆ.

’ಈ ವಿಲೀನದಿಂದ ಹೊಸದಾಗಿ ಅಸ್ತಿತ್ವಕ್ಕೆ ಬರುವ ಸಂಸ್ಥೆಯ ಒಟ್ಟಾರೆ ಮೌಲ್ಯ ₹ 15 ಸಾವಿರ ಕೋಟಿಗಳಷ್ಟಾಗಲಿದೆ. ಈ ವಿಲೀನ ಪ್ರಕ್ರಿಯೆ  10ರಿಂದ 12 ತಿಂಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದು ಫೋರ್ಟಿಸ್‌ ಹೆಲ್ತ್‌ಕೇರ್‌ನ ಸಿಇಒ ಭವದೀಪ್‌ ಸಿಂಗ್‌ ಹೇಳಿದ್ದಾರೆ.

ಎಸ್‌ಆರ್‌ಎಲ್‌ ಡಯಗ್ನಾಸ್ಟಿಕ್ಸ್‌ ಲಿಮಿಟೆಡ್‌ನಲ್ಲಿನ ಶೇ 20ರಷ್ಟು ಪಾಲನ್ನು ಮಣಿಪಾಲ್ ಹಾಸ್ಪಿಟಲ್‌ಗೆ ಮಾರಾಟ ಮಾಡಲೂ ತೀರ್ಮಾನಿಸಲಾಗಿದೆ. ಈ ವಿಲೀನ ಪ್ರಕ್ರಿಯೆಗೆ ಪೂರಕವಾಗಿ ಆಸ್ಪತ್ರೆಯ ವಹಿವಾಟನ್ನು ಬೇರ್ಪಡಿಸುವುದಕ್ಕೆ ಫೋರ್ಟಿಸ್‌ನ ನಿರ್ದೇಶಕ ಮಂಡಳಿಯು ಸಮ್ಮತಿ ನೀಡಿದೆ.

ಮಣಿಪಾಲ್‌ ಎಜುಕೇಷನ್‌ ಆ್ಯಂಡ್‌ ಮೆಡಿಕಲ್‌ ಗ್ರೂಪ್‌ನ  (ಎಂಇಎಂಜಿ) ಅಂಗಸಂಸ್ಥೆಯಾಗಿರುವ ಮಣಿಪಾಲ್‌ ಹಾಸ್ಪಿಟಲ್ಸ್‌, ಡಾ. ರಂಜನ್‌ ಪೈ ಅವರ ಒಡೆತನದಲ್ಲಿ ಇದೆ.

ಆರೋಗ್ಯ ರಕ್ಷಣೆ ಹೂಡಿಕೆ ಸಂಸ್ಥೆ ‘ಟಿಪಿಜಿ’, ಮಣಿಪಾಲ್ ಹಾಸ್ಪಿಟಲ್ಸ್‌ನಲ್ಲಿ ಪಾಲು ಬಂಡವಾಳ ಹೊಂದಿದೆ. ಡಾ. ರಂಜನ್‌ ಪೈ ಮತ್ತು ಟಿಪಿಜಿ, ಮಣಿಪಾಲ್‌ ಹಾಸ್ಪಿಟಲ್ಸ್‌ನಲ್ಲಿ ₹ 3,900 ಕೋಟಿಗಳಷ್ಟು ಬಂಡವಾಳ ತೊಡಗಿಸಲಿದ್ದಾರೆ.

ತಿಂಗಳಲ್ಲಿ ಷೇರುದಾರರ ಸಭೆ: ಈ ಸ್ವಾಧೀನಕ್ಕೆ ಒಂದು ತಿಂಗಳಲ್ಲಿ ಷೇರುದಾರರ ಸಮ್ಮತಿ ಪಡೆಯಲು ಮಣಿಪಾಲ್‌ ಗ್ರೂಪ್‌ನ ಪ್ರವರ್ತಕ ರಂಜನ್‌ ಪೈ ಅವರು ಕಾರ್ಯಪ್ರವೃತ್ತರಾಗಿದ್ದಾರೆ.

‘ಫೋರ್ಟಿಸ್‌ನ ಹಾಲಿ ಷೇರುದಾರರು  ತಮ್ಮ ಷೇರುಗಳನ್ನು ಯಾರಿಗಾದರೂ ಮಾರಾಟ ಮಾಡಲು ಸ್ವತಂತ್ರರಾಗಿದ್ದಾರೆ.

‘ಜಪಾನಿನ ಪ್ರಮುಖ ಔಷಧಿ ಸಂಸ್ಥೆ ಡಾಯಿಚಿ ಸ್ಯಾಂಕೊ ಈ ವಿಷಯದಲ್ಲಿ ಅಡ್ಡಿಪಡಿಸುವ ಅಧಿಕಾರ ಹೊಂದಿಲ್ಲ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಪ್ರವರ್ತಕರಾದ ಸಿಂಗ್‌ ಸೋದರರು ಫೋರ್ಟಿಸ್‌ ಮತ್ತು ರೆಲಿಗೇರ್‌ನಲ್ಲಿ ಹಣಕಾಸು ಅಕ್ರಮ ಎಸಗಿರುವ ಕಾರಣಕ್ಕೆ ಗಂಭೀರ ಸ್ವರೂಪದ ತನಿಖಾ ಕಚೇರಿಯ ವಿಚಾರಣೆಗೆ ಒಳಪಟ್ಟಿರುವ ಸಂದರ್ಭದಲ್ಲಿಯೇ ಈ ವಿಲೀನ ಪ್ರಕ್ರಿಯೆಗೆ ಚಾಲನೆ ದೊರೆತಿದೆ.

ಮಲ್ವಿಂದರ್‌ ಸಿಂಗ್‌ ಮತ್ತು ಶಿವಿಂದರ್‌ ಸಿಂಗ್‌ ಅವರು ಈಗಾಗಲೇ, ಫೋರ್ಟಿಸ್‌ ಮತ್ತು ರೆಲಿಗೇರ್‌ನ ನಿರ್ದೇಶಕ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ.

ವಿಲೀನದ ಪರಿಣಾಮಗಳು

41 ಆಸ್ಪತ್ರೆಗಳು ಒಂದೇ ಸಂಸ್ಥೆಯ ಆಡಳಿತದ ವ್ಯಾಪ್ತಿಗೆ

11 ಸಾವಿರ – ಆಸ್ಪತ್ರೆಗಳಲ್ಲಿನ ಹಾಸಿಗೆಗಳ ಸಾಮರ್ಥ್ಯ

4,200 – ವೈದ್ಯರು

9,300 – ದಾದಿಯರು

11,400 – ಆಸ್ಪತ್ರೆಗಳ ಇತರ ಸಿಬ್ಬಂದಿ ಸಂಖ್ಯೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry