ಇಂಗ್ಲೆಂಡ್‌ ತಂಡದಲ್ಲಿ ವುಡ್‌ಗೆ ಸ್ಥಾನ

7

ಇಂಗ್ಲೆಂಡ್‌ ತಂಡದಲ್ಲಿ ವುಡ್‌ಗೆ ಸ್ಥಾನ

Published:
Updated:
ಇಂಗ್ಲೆಂಡ್‌ ತಂಡದಲ್ಲಿ ವುಡ್‌ಗೆ ಸ್ಥಾನ

ಕ್ರೈಸ್ಟ್‌ಚರ್ಚ್‌: ವೇಗದ ಬೌಲರ್‌ ಮಾರ್ಕ್‌ ವುಡ್‌ ಅವರು ನ್ಯೂಜಿಲೆಂಡ್‌ ಎದುರಿನ ಎರಡನೇ ಟೆಸ್ಟ್‌ ಪಂದ್ಯಕ್ಕೆ ಇಂಗ್ಲೆಂಡ್‌ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ ಗುರುವಾರ 12 ಸದಸ್ಯರ ತಂಡವನ್ನು ಪ್ರಕಟಿಸಿದೆ.

ಅನುಭವಿ ಆಲ್‌ರೌಂಡರ್‌ ಮೋಯಿನ್ ಅಲಿ ಮತ್ತು ವೇಗದ ಬೌಲರ್‌ ಕ್ರಿಸ್‌ ವೋಕ್ಸ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಮೋಯಿನ್‌ ಅವರು ಮೊದಲ ಟೆಸ್ಟ್‌ ಪಂದ್ಯದಲ್ಲಿ ಎರಡು ಇನಿಂಗ್ಸ್‌ಗಳಿಂದ 28ರನ್‌ ಗಳಿಸಿದ್ದರು. ಆ್ಯಷಸ್‌ ಸರಣಿಯಲ್ಲೂ ಅವರು ವಿಫಲರಾಗಿದ್ದರು. ವೋಕ್ಸ್‌ ಕೂಡ ಪರಿಣಾಮಕಾರಿ ಆಟ ಆಡಿರಲಿಲ್ಲ.

ಕೌಂಟಿ ಕ್ರಿಕೆಟ್‌ನಲ್ಲಿ ಸೋಮರ್‌ಸೆಟ್‌ ತಂಡದಲ್ಲಿ ಆಡುವ ಸ್ಪಿನ್ನರ್‌ ಜ್ಯಾಕ್‌ ಲೀಚ್‌ ಮೊದಲ ಬಾರಿಗೆ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಬ್ಯಾಟ್ಸ್‌ಮನ್‌ ಜೇಮ್ಸ್‌ ವಿನ್ಸ್‌ ಕೂಡ ತಂಡದಲ್ಲಿದ್ದಾರೆ.

ಎರಡನೇ ಟೆಸ್ಟ್‌ ಪಂದ್ಯ ಶುಕ್ರವಾರದಿಂದ ಹೇಗ್ಲೆ ಓವಲ್ ಮೈದಾನದಲ್ಲಿ ನಡೆಯಲಿದೆ. ಮೊದಲ ಹೋರಾಟದಲ್ಲಿ ಇನಿಂಗ್ಸ್‌ ಮತ್ತು 49ರನ್‌ಗಳಿಂದ ಸೋತಿದ್ದ ಆಂಗ್ಲರ ನಾಡಿನ ತಂಡ ಈ ಪಂದ್ಯದಲ್ಲಿ ಗೆದ್ದು ಸರಣಿ ಸಮ ಮಾಡಿಕೊಳ್ಳುವ ಆಲೋಚನೆ ಹೊಂದಿದೆ.

ತಂಡ ಇಂತಿದೆ: ಜೋ ರೂಟ್‌ (ನಾಯಕ), ಜೇಮ್ಸ್‌ ಆ್ಯಂಡರ್‌ಸನ್‌, ಜಾನಿ ಬೇಸ್ಟೋ, ಸ್ಟುವರ್ಟ್‌ ಬ್ರಾಡ್‌, ಅಲಸ್ಟೇರ್‌ ಕುಕ್‌, ಜ್ಯಾಕ್‌ ಲೀಚ್‌, ಡೇವಿಡ್‌ ಮಲಾನ್‌, ಕ್ರೇಗ್‌ ಓವರ್‌ಟನ್‌, ಬೆನ್‌ ಸ್ಟೋಕ್ಸ್‌, ಮಾರ್ಕ್‌ ಸ್ಟೋನ್‌ಮನ್‌, ಜೇಮ್ಸ್‌ ವಿನ್ಸ್‌ ಮತ್ತು ಮಾರ್ಕ್‌ ವುಡ್‌.

ಪಂದ್ಯ ಆರಂಭ : ಮಧ್ಯಾಹ್ನ 3

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry