ದಿಮಾಸ್ ಜೊತೆಗಿನ ಒಪ್ಪಂದ ಮುಂದುವರಿಸಿದ ಬಿಎಫ್‌ಸಿ

7

ದಿಮಾಸ್ ಜೊತೆಗಿನ ಒಪ್ಪಂದ ಮುಂದುವರಿಸಿದ ಬಿಎಫ್‌ಸಿ

Published:
Updated:
ದಿಮಾಸ್ ಜೊತೆಗಿನ ಒಪ್ಪಂದ ಮುಂದುವರಿಸಿದ ಬಿಎಫ್‌ಸಿ

ಬೆಂಗಳೂರು: ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ್ದ ದಿಮಾಸ್‌ ಡೆಲ್ಗಾಡೊ ಅವರೊಂದಿಗಿನ ಒಪ್ಪಂದವನ್ನು ಒಂದು ವರ್ಷದ ಅವಧಿಗೆ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಮುಂದುವರಿಸಿದೆ.

ದಿಮಾಸ್‌ 2019ರವರೆಗೆ ಬಿಎಫ್‌ಸಿ ತಂಡದೊಂದಿಗೆ ಆಡಲಿದ್ದಾರೆ ಎಂದು  ಕ್ಲಬ್‌ ಮಾಹಿತಿ ನೀಡಿದೆ.

‘ಬೆಂಗಳೂರು ಕ್ಲಬ್‌ನೊಂದಿಗೆ ಮುಂದುವರಿಯುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಈ ತಂಡದೊಂದಿಗೆ ಇದ್ದ ಪ್ರತಿ ಕ್ಷಣವನ್ನು ನಾನು ಸಂತೋಷದಿಂದ ಕಳೆದಿದ್ದೇನೆ. ನನ್ನ ಕುಟುಂಬದವರು ಕೂಡ ಖುಷಿಯಾಗಿದ್ದಾರೆ’ ಎಂದು ದಿಮಾಸ್ ಹೇಳಿದ್ದಾರೆ.

ಈ ಋತುವಿನಲ್ಲಿ ಆರು ಆಟಗಾರರು ಬಿಎಫ್‌ಸಿ ಕ್ಲಬ್‌ನೊಂದಿಗೆ ಒಪ್ಪಂದ ಮುಂದುವರಿಸಿದ್ದಾರೆ. ದಿಮಾಸ್ ಐಎಸ್‌ಎಲ್‌ ಟೂರ್ನಿಯ ಪಂದ್ಯದಲ್ಲಿ ಎಫ್‌ಸಿ ಗೋವಾ ತಂಡದ ಎದುರು ಗೋಲು ದಾಖಲಿಸಿ ಮಿಂಚಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry