ಉದ್ದದ ಸೇತುವೆ ವೀಕ್ಷಣೆಗೆ ಸಿದ್ಧ

7

ಉದ್ದದ ಸೇತುವೆ ವೀಕ್ಷಣೆಗೆ ಸಿದ್ಧ

Published:
Updated:
ಉದ್ದದ ಸೇತುವೆ ವೀಕ್ಷಣೆಗೆ ಸಿದ್ಧ

ಹಾಂಕಾಂಗ್‌: ವಿಶ್ವದಲ್ಲೇ ಅತೀ ಉದ್ದದ ಸಮುದ್ರ ಸೇತುವೆಯನ್ನು ಚೀನಾ ನಿರ್ಮಿಸಿದ್ದು,  ಸೇತುವೆಯ ವೀಕ್ಷಣೆಗೆ ಈ ವಾರ ಅವಕಾಶ ಕಲ್ಪಿಸಲಾಗುವುದು ಎಂದು ಸರ್ಕಾರ ಹೇಳಿದೆ.

ಆದರೆ ಸೇತುವೆಯನ್ನು ಸಂಚಾರ ಮುಕ್ತಗೊಳಿಸುವ ದಿನಾಂಕವನ್ನು ಅಧಿಕಾರಿಗಳು ಪ್ರಕಟಿಸಿಲ್ಲ.55 ಕಿ.ಮೀ. ಉದ್ದದ ಸೇತುವೆಯು ನೀರಿನೊಳಗೆ 6.7ಕಿ.ಮೀ. ಮಾರ್ಗವನ್ನು  ಹೊಂದಿದೆ.

‘ಈ ಸೇತುವೆ ಹಾಂಕಾಂಗ್‌ ಮತ್ತು  ದಕ್ಷಿಣ ಚೀನಾದ ಜುಹೈ ನಗರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಒಂಬತ್ತು ವರ್ಷಗಳ ಹಿಂದೆ ಇದರ ನಿರ್ಮಾಣ ಕಾರ್ಯ ಆರಂಭಿಸಲಾಗಿತ್ತು. ಈ ಬೃಹತ್‌ ಯೋಜನೆಗೆ ಸುಮಾರು ₹ 9.83 ಲಕ್ಷ ಕೋಟಿ (15.1ಬಿಲಿಯನ್‌ ಡಾಲರ್‌) ವೆಚ್ಚ ಮಾಡಲಾಗಿದೆ’ ನೀರಿನೊಳಗಿನ ಸುರಂಗ ಮಾರ್ಗ ನಿರ್ಮಾಣಕ್ಕೆ 80 ಸಾವಿರ ಟನ್‌ ಪೈಪ್‌ಗಳನ್ನು ಬಳಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

60 ಐಫೆಲ್‌ ಟವರ್‌ ನಿರ್ಮಿಸುವಷ್ಟು ಉಕ್ಕನ್ನು ಸೇತುವೆ ನಿರ್ಮಾಣಕ್ಕೆ ಬಳಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry