ಆಲಿಕಲ್ಲು ಸಹಿತ ಮಳೆ

7

ಆಲಿಕಲ್ಲು ಸಹಿತ ಮಳೆ

Published:
Updated:

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ನಗರದ ಹಲವೆಡೆ ಆಲಿಕಲ್ಲು ಸಹಿತವಾಗಿ ಗುರುವಾರ ಮಳೆ ಸುರಿಯಿತು.

ಜಯನಗರ, ಬನಶಂಕರಿ, ಬಸವನಗುಡಿ, ಚಾಮರಾಜಪೇಟೆ, ಜಾಲಹಳ್ಳಿ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆ ಜೋರಾಗಿತ್ತು. ಮೈಸೂರು ರಸ್ತೆಯಲ್ಲಿ ತುಂತುರು ಮಳೆಯಾಯಿತು. ಬೆಳಿಗ್ಗೆ ನಗರದಲ್ಲಿ ಬಿಸಿಲುಹೆಚ್ಚಿತ್ತು.

ಸಂಜೆ ಮೋಡ ಕವಿದ ವಾತಾವರಣ ಕಂಡುಬಂತು. ನಂತರ, 15 ನಿಮಿಷಕ್ಕೂ ಹೆಚ್ಚು ಆಲಿಕಲ್ಲು ಮಳೆ ಸುರಿಯಿತು.

ವಿದ್ಯುತ್‌ ವ್ಯತ್ಯಯ: ಮಳೆಯ ವೇಳೆ ಗಾಳಿಯೂ ಜೋರಾಗಿಯೇ ಬೀಸಿತು. ಇದರಿಂದಾಗಿ ಜಯನಗರ, ಬನಶಂಕರಿ, ಬಸವನಗುಡಿ ಹಾಗೂ ಸುತ್ತಮುತ್ತಲ ಕೆಲ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜು ಕಡಿತಗೊಳಿಸಲಾಗಿತ್ತು.

‘ರಾಜ್ಯದಾದ್ಯಂತ ಇನ್ನೆರಡು ದಿನ ಮಳೆಯಾಗುವ ಸಾಧ್ಯತೆ ಇದೆ’ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಕೇಂದ್ರದ ನಿರ್ದೇಶಕ ಜಿ.ಎಸ್‌. ಶ್ರೀನಿವಾಸ ರೆಡ್ಡಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry