ಮೈಸೂರಿನಲ್ಲಿ ಸವಾರಿ ಬೆಂಗಳೂರಿನಲ್ಲಿ ದಂಡ!

7

ಮೈಸೂರಿನಲ್ಲಿ ಸವಾರಿ ಬೆಂಗಳೂರಿನಲ್ಲಿ ದಂಡ!

Published:
Updated:
ಮೈಸೂರಿನಲ್ಲಿ ಸವಾರಿ ಬೆಂಗಳೂರಿನಲ್ಲಿ ದಂಡ!

ಬೆಂಗಳೂರು: ಹೆಲ್ಮೆಟ್‌ ಧರಿಸದೆ ಮೈಸೂರಿನಲ್ಲಿ ಬುಲೆಟ್‌ ಬೈಕ್‌ ಓಡಿಸಿದ್ದರು ಎನ್ನಲಾದ ಸಂಸದ ಪ್ರತಾಪ ಸಿಂಹ ಅವರಿಗೆ ಬೆಂಗಳೂರಿನ ಸಂಚಾರ ಪೊಲೀಸರು ₹100 ದಂಡ ವಿಧಿಸಿದ್ದಾರೆ.

ಮಗಳನ್ನು ಬೈಕ್‌ನಲ್ಲಿ (ಕೆಎ09 ಎಚ್‌ಎನ್‌ 5999) ಸುತ್ತಾಡಿಸಿದ್ದ ಸಂಸದರು, ಆ ಫೋಟೊವನ್ನು ಟ್ವಿಟರ್ ಖಾತೆಯಲ್ಲಿ ಮಾರ್ಚ್‌ 18ರಂದು ಅಪ್‌ಲೋಡ್‌ ಮಾಡಿದ್ದರು.

ಅದನ್ನು ನೋಡಿದ್ದ ಬೆಂಗಳೂರಿನ ನಿವಾಸಿಯೊಬ್ಬರು, ‘ಹೆಲ್ಮೆಟ್‌ ಧರಿಸದೆ ಸಂಸದ ಬೈಕ್‌ ಓಡಿಸಿದ್ದಾರೆ. ಅದು ಸಹ ಮಗುವಿನೊಂದಿಗೆ. ಜತೆಗೆ, ಆ ಫೋಟೊವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದಾರೆ’ ಎಂದು ಸಂಚಾರ ಪೊಲೀಸರ ‘ಪಬ್ಲಿಕ್ ಐ‘ ಆ್ಯಪ್‌ನಲ್ಲಿ ದೂರು ದಾಖಲಿಸಿದ್ದರು.

ಅದನ್ನು ಪರಿಶೀಲನೆ ನಡೆಸಿದ್ದ ಸಂಚಾರ ನಿರ್ವಹಣಾ ಕೇಂದ್ರದ ಸಿಬ್ಬಂದಿ, ಮಾ. 19ರಂದು ₹100 ದಂಡ ವಿಧಿಸಿದ್ದಾರೆ. ಅದರ ಮಾಹಿತಿಯನ್ನು ಜಾಲತಾಣದಲ್ಲೂ ಅಪ್‌ಲೋಡ್‌ ಮಾಡಿದ್ದಾರೆ.

‘ಪಬ್ಲಿಕ್‌ ಐ’ ಆ್ಯಪ್‌ನಲ್ಲಿ ಬಂದ ದೂರುಗಳನ್ನು ಪರಿಶೀಲಿಸಿ ದಂಡ ವಿಧಿಸಲೆಂದೇ ಪ್ರತ್ಯೇಕ ಸಿಬ್ಬಂದಿ ಇದ್ದಾರೆ. ಸಂಸದರಿಗೆ ದಂಡ ವಿಧಿಸಿರುವ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದು ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಸಂಚಾರ) ಆರ್‌.ಹಿತೇಂದ್ರ ಪ್ರತಿಕ್ರಿಯಿಸಿದರು. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪ್ರತಾಪಸಿಂಹ ಅವರಿಗೆ ಕರೆ ಮಾಡಿದಾಗ ಅವರ ಮೊಬೈಲ್‌ ಸ್ವಿಚ್ಡ್‌ ಆಫ್‌ ಆಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry