ನೀತಿ ಸಂಹಿತೆ: ವಾಹನ ತಪಾಸಣೆ

6

ನೀತಿ ಸಂಹಿತೆ: ವಾಹನ ತಪಾಸಣೆ

Published:
Updated:

ಕಲಾದಗಿ: ರಾಜ್ಯ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಇಲ್ಲಿನ ಪೊಲೀಸ್‌ ಠಾಣೆ ವ್ಯಾಪ್ತಿಯ ರಾಜ್ಯ ಹೆದ್ದಾರಿ ಹಾಗೂ ಗದ್ದನಕೇರಿ ಕ್ರಾಸ್ ಬಳಿ ಹಾಯ್ದು ಹೋಗುವ ವಾಹನಗಳ ತಪಾಸಣೆ ನಡೆಸಲಾಯಿತು.ಅಕ್ರಮ ಹಣ ಹಾಗೂ ಮದ್ಯಪಾನ ತಡೆಗಟ್ಟುವ ಉದ್ದೇಶದಿಂದ ತಪಾಸಣೆ ಪ್ರಾರಂಭಿಸಿದ್ದು, ಚುನಾವಣೆ ಪಕ್ರಿಯೆ ಮುಗಿಯುವರೆಗೆ ತಪಾಸಣಾ ಕಾರ್ಯ ಮುಂದುವರೆಯಲಿದೆ ಎಂದು ಪಿಎಸ್‌ಐ ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಜಾಹೀರಾತು ಫಲಕ ತೆರವು: ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಬುಧವಾರ ಇಲ್ಲಿನ ವಿವಿಧ ಮುಖ್ಯ ರಸ್ತೆಗಳಲ್ಲಿ ಹಾಕಿದ್ದ ಸರ್ಕಾರಿ ಹಾಗೂ ರಾಜಕೀಯ ಪಕ್ಷಗಳ ಜಾಹೀರಾತು ಫಲಕಗಳನ್ನು ಗ್ರಾಮ ಪಂಚಾಯ್ತಿ ಅಧಿಕಾರಿಗಳು ತೆರವುಗೊಳಿಸಿದರು. ಗೋಡೆ ಮೇಲೆ ಬರೆದ ರಾಜಕೀಯ ಪಕ್ಷಗಳ ಚಿಹ್ನೆಗಳಿಗೆ ಬಿಳಿ ಬಣ್ಣ ಹಚ್ಚಿದರು.ಜಿಲ್ಲಾಧಿಕಾರಿಗಳಿಂದ ಸೂಚನೆ ಬಂದಿರುವುದರಿಂದ ರಾಜಕೀಯ ಪಕ್ಷ ಹಾಗೂ ವ್ಯಕ್ತಿಗಳಿಗೆ ಸೇರಿದ ಎಲ್ಲ ರೀತಿಯ ಜಾಹೀರಾತು ಫಲಕಗಳನ್ನು ತೆಗೆದು ಹಾಕುತ್ತಿದ್ದೇವೆ ಎಂದು ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ರಮೇಶ ಬಡಿಗೇರ ತಿಳಿಸಿದರು.ಫಲಕ, ಬ್ಯಾನರ್ ತೆರವು

ಗುಳೇದಗುಡ್ಡ: ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟಗೊಂಡು ನೀತಿ ಸಂಹಿತೆ ಜಾರಿಯಾದ ಹಿನ್ನೆಲೆ ಯಿಂದಾಗಿ ಪುರಸಭೆ ಅಧಿಕಾರಿಗಳು ಪಟ್ಟಣದ ವಿವಿಧ ಪ್ರಮುಖ ರಸ್ತೆಗಳಲ್ಲಿ ಹಾಗೂ ಬೀದಿಗಳಲ್ಲಿ ಹಾಕಿರುವ ರಾಜ ಕೀಯ ಪಕ್ಷಗಳ ಜಾಹೀರಾತು ಫಲಕ, ಬ್ಯಾನರ್ ಬುಧವಾರ ಪುರಸಭೆ ಸಿಬ್ಬಂದಿ ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು.ಚುನಾವಣೆ ನೀತಿ ಸಂಹಿತೆ ಕೈಗೆ ಸಿಗುತ್ತಿದ್ದಂತೆ ಪುರಸಭೆ ಅಧಿಕಾರಿಗಳು ಪಟ್ಟಣದ ಗೋಡೆಗಳ ಮೇಲಿನ ಪಕ್ಷದ ಚಿನ್ನೆ ಬರಹದ ಚಿತ್ರಗಳ ಮತ್ತು ಫಲಕ ಬಿಡದೆ ಅವುಗಳನ್ನು ತೆರವುಗೊಳಿಸುವ ಮೂಲಕ ಅವುಗಳಿಗೆ ಸುಣ್ಣ ಬಣ್ಣ ಬಳಿದರು.ಈ ಕುರಿತು ಮಾಹಿತಿ ನೀಡಿದ ಪುರಸಭೆ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಂದ ಚುನಾವಣೆ ನೀತಿ ಸಂಹಿತೆ ಬಗ್ಗೆ ಮಾಹಿತಿ ಬಂದಿರುವುದರಿಂದ ಪಟ್ಟಣದಲ್ಲಿ ರಾಜಕೀಯ ಪಕ್ಷ ಮತ್ತು ವ್ಯಕ್ತಿಗಳಿಗೆ ಸೇರಿದ ಎಲ್ಲ ರೀತಿಯ ಜಾಹೀರಾತು ಫಲಕ, ಬ್ಯಾನರ್‌ಗಳನ್ನು ತೆಗೆದು ಹಾಕುತ್ತಿದ್ದೇವೆ ಎಂದು ಪುರಸಭೆ ಮುಖ್ಯಾಧಿಕಾರಿ ಏಸು ಬೆಂಗಳೂರು ಹೇಳಿದರು.

ಚುನಾವಣೆ ನೀತಿ ಸಂಹಿತೆ ಅನುಸಾರ ಪಟ್ಟಣದಲ್ಲಿಡೆ ರಾಜಕೀಯ ಪಕ್ಷಗಳಿಂದ ಸರ್ಕಾರಿ ಮತ್ತು ಆಯಾ ಖಾಸಗಿ ಮನೆಗಳ ಗೋಡೆಗಳಲ್ಲಿ ಬರೆದಿರುವ ಪ್ರಚಾರದ ಚಿತ್ರ ಮತ್ತು ಬರಹ, ಫಲಕಗಳನ್ನೂ ಸಹಿತ ಅಳಿಸಿ ಹಾಕಲಾಗುವುದು. ಇನ್ನು ಮುಂದೆ ಪುರಸಭೆ ಅನುಮತಿಯಿಲ್ಲದೆ ಯಾರೂ ಚುನಾವಣೆ ಪ್ರಚಾರದ ಬ್ಯಾನರ್ ಸೇರಿದಂತೆ ಇತರೆ ಸಾಮಗ್ರಿಗಳ ಪ್ರದರ್ಶನಕ್ಕೆ ಹಾಕಬಾರದು ಎಂದು ಸೂಚಿಸಿದರು. ಸರ್ಕಾರದ ಆದೇಶದನುಸಾರ ಚುನಾವಣೆ ನೀತಿ ಸಂಹಿತೆ ನಿಯಮವನ್ನು ಎಲ್ಲರೂ ಪಾಲಿಸಬೇಕಾದದು ಕರ್ತವ್ಯವಾಗಿದೆ. ಯಾರೂ ಸಹಿತ ಅನಿಧಿಕೃತ ಬ್ಯಾನರ್ ಮತ್ತು ಪ್ರಚಾರದ ಸಾಮಗ್ರಿಗಳನ್ನು ಸಾರ್ವಜನಿಕರ ವಲಯದಲ್ಲಿ ಪ್ರದರ್ಶನ ಮಾಡಬಾರದು. ಕಾನೂನು ಮೀರಿ ಕಾರ್ಯ ನಡೆಸಿದ್ದಲ್ಲಿ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಹಾಗೂ ಚುನಾವಣೆ ನೀತಿ ಸಂಹಿತೆ ಅಧಿಕಾರಿ ಏಸು ಬೆಂಗಳೂರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry