7

ಚುನಾವಣಾ ನೀತಿಸಂಹಿತೆ: ಕಡ್ಡಾಯ ಪಾಲನೆಗೆ ಸೂಚನೆ

Published:
Updated:

ಹುಕ್ಕೇರಿ: ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದು, ಚುನಾವಣಾ ಆಯೋಗದ ಸಲಹೆ–ಸೂಚನೆಗಳನ್ನು ಸೆಕ್ಟರ್ ಅಧಿಕಾರಿಗಳು ಹಾಗೂ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಬೆಳಗಾವಿ ಉಪವಿಭಾಗಾಧಿಕಾರಿ ಹಾಗೂ ಯಮಕನ ಮರಡಿ ಕ್ಷೇತ್ರದ ಚುನಾವಣಾಧಿಕಾರಿ ಕವಿತಾ ಯೋಗಪ್ಪನವರ ಸೂಚನೆ ನೀಡಿದರು.

ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಸೆಕ್ಟರ್, ಸರ್ವೇಲನ್ಸ್, ವಿಡಿಯೊ, ನೋಡಲ್ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಸಿ ಚುನಾವಣೆ ನೀತಿ ಸಂಹಿತೆ ಪಾಲನೆ ಕುರಿತು  ನಿರ್ದೇಶನ ನೀಡಿದರು.ಮತಗಟ್ಟೆಗಳ ಸ್ಥಾಪಿಸುವ ನಿಟ್ಟಿನ್ಲಲಿ ಆಯಾ ಪಿಡಿಒ ಮತ್ತು ಗ್ರಾಮ ಲೆಕ್ಕಾಧಿಕಾರಿ ಜತೆ ಚರ್ಚಿಸಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ ಸರಿಯಾಗಿರುವಂತೆ ನೋಡಿಕೊಳ್ಳಬೇಕು ಎಂದರು.

ಹುಕ್ಕೇರಿ ಚುನಾವಣಾಧಿಕಾರಿ ವಿ.ವಿ. ಕುಲಕರ್ಣಿ, ತಹಶೀಲ್ದಾರ್ ಅಶೋಕ ಗುರಾಣಿ ಮಾತನಾಡಿ, ಚುನಾವಣೆಗೆ ನಿಯೋಜಿತ ಅಧಿಕಾರಿಗಳು ಕೇಂದ್ರ ಸ್ಥಾನ

ಬಿಡುವಂತಿಲ್ಲ. ಅವರಿಗೆ ನೀಡಿದ ಕರ್ತವ್ಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು.

ಹಳ್ಳಿ, ತೋಟದ ಮನೆ, ದೇವಸ್ಥಾನಗಳಲ್ಲಿ ಭೋಜನ ವ್ಯವಸ್ಥೆ ಮಾಡಿದ್ದು ಕಂಡು ಬಂದರೆ ತಕ್ಷಣ ಮೇಲಧಿಕಾರಿಗಳ ಗಮನಕ್ಕೆ ತರಬೇಕು ಎಂದು ಹೇಳಿದರು.ತಾಲ್ಲೂಕು ಪಂಚಾಯ್ತಿ ಇಒ ಎಂ.ಎಸ್. ಬಿರಾದಾರ ಪಾಟೀಲ, ವಿಡಿಯೊ ಸರ್ವೆಲೆನ್ಸ್ ಆಫೀಸರ್ ವಿ.ಎನ್.ಪಾಟೀಲ, ಅಜೀತ ಪಾಟೀಲ, ಹುಕ್ಕೇರಿ, ಯಮಕನಮರಡಿ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿಗಳು ಇದ್ದರು.‌‌ತಹಶೀಲ್ದಾರ್ ಅಶೋಕ ಗುರಾಣಿ ಸ್ವಾಗತಿಸಿದರು. ಉಪತಹಶೀಲ್ದಾರ್ ಎಸ್.ಎಸ್.ಬಾಲ್ದಾರ್ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry