‘ಇ–ತ್ಯಾಜ್ಯ ನಿರ್ಲಕ್ಷ್ಯ ಬೇಡ’

7
ಇ–ತ್ಯಾಜ್ಯ ನಿರ್ವಹಣೆ ಕಾರ್ಯಾಗಾರ ಸಮಾರೋಪ: ಮೂಲಗೆ ಎಚ್ಚರಿಕೆ

‘ಇ–ತ್ಯಾಜ್ಯ ನಿರ್ಲಕ್ಷ್ಯ ಬೇಡ’

Published:
Updated:

ಬೀದರ್: ‘ಇ-ತ್ಯಾಜ್ಯ ವಿಲೇವಾರಿಗೆ ನಿರ್ಲಕ್ಷ್ಯ ವಹಿಸಿದರೆ ಅಪಾಯ ಎದುರಾಗಲಿದೆ. ನಿರುಪಯುಕ್ತ ಹಳೆಯ ವಿದ್ಯುನ್ಮಾನ ಮತ್ತು ವಿದ್ಯುತ್ ಉಪಕರಣಗಳು ಜನರ ಆರೋಗ್ಯ ಮತ್ತು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತವೆ’ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಅನ್ವಯಿಕ ವಿದ್ಯುನ್ಯಾನ ವಿಭಾಗದ ಪ್ರೊ. ಎಸ್‌.ಎನ್‌. ಮೂಲಗೆ ತಿಳಿಸಿದರು.

ನಗರದ ಕರ್ನಾಟಕ ಕಾಲೇಜಿನಲ್ಲಿ ಬುಧವಾರ ನಡೆದ ಇ–ತ್ಯಾಜ್ಯ ನಿರ್ವಹಣೆ ಕುರಿತ ಮೂರು ದಿನಗಳ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಹಾಳಾದ ವಿದ್ಯುನ್ಮಾನ ಮತ್ತು ವಿದ್ಯುತ್ ಉಪಕರಣಗಳನ್ನು ಖಾಲಿ ಪ್ರದೇಶದಲ್ಲಿ ಎಸೆಯುವುದರಿಂದ ಮಣ್ಣು, ನೀರು ಮತ್ತು ವಾತಾವರಣ ಕಲುಷಿತಗೊಳ್ಳುತ್ತದೆ. ಅವು ಹೊರಸೂಸುವ ಅರ್ಸನಿಕ್, ಪಾದರಸ, ಲೆಡ್, ನಿಕ್ಕಲ್ ಕ್ಯಾಡ್ಮಿಯಂ ಆಕ್ಸೈಡ್ ಸೆಲೇನಿಯಂನಂಥ ವಿಷಯುಕ್ತ ಅನಿಲಗಳು ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿವೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry