ದಲಿತರ ಮೇಲೆ ಹಲ್ಲೆ: ಖಂಡನೆ

7

ದಲಿತರ ಮೇಲೆ ಹಲ್ಲೆ: ಖಂಡನೆ

Published:
Updated:

ಭಾಲ್ಕಿ: ತಾಲ್ಲೂಕಿನ ಸಿದ್ದೇಶ್ವರ ಗ್ರಾಮದಲ್ಲಿ ಈಚೆಗೆ ನಡೆದ ದಲಿತರ ಮೇಲಿನ ಹಲ್ಲೆ ಖಂಡಿಸಿ ದಲಿತಪರ ಸಂಘಟನೆಗಳ ಒಕ್ಕೂಟದ ಪದಾಧಿ ಕಾರಿಗಳು ಗುರುವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ಪ್ರಮುಖರು, ‘ದಲಿತ ಯುವಕ ಹೊಟ್ಟೆಪಾಡಿಗಾಗಿ ಜಾತ್ರೆಯಲ್ಲಿ ತಾತ್ಕಾಲಿಕ ತಳ್ಳು ಬಂಡಿಯ ಮೇಲೆ ಚಹಾ ಮಾರಾಟ ಮಾಡುತ್ತಿದ್ದಾಗ ಸವರ್ಣಿಯರು ನಿನ್ನ ಚಹಾ ಯಾರು ಕುಡಿಯಬೇಕು ಎಂದು ಜಗಳ ತೆಗೆದು ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ 200ಕ್ಕೂ ಹೆಚ್ಚು ಜನರು ಕೈಯಲ್ಲಿ ಬಡಿಗೆ, ಕಲ್ಲು ಮಾರಾಕಾಸ್ತ್ರಗಳನ್ನು ಹಿಡಿದಿಕೊಂಡು ದಲಿತರ ಓಣಿಗೆ ನುಗ್ಗಿ ಜಾತಿ ನಿಂದನೆ ಮಾಡುತ್ತಾ ಕಲ್ಲು, ಬಡಿಗೆಗಳಿಂದ ಹೊಡೆದಿದ್ದಾರೆ’ ಎಂದು ಆರೋಪಿಸಿದರು.

‘ಈ ವಿಷಯ ಸಂಬಂಧ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಂಡು ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕು. ದಲಿತರ ಮೇಲೆ ದಾಖಲಿಸಿರುವ ಪ್ರಕರಣವನ್ನು ಹಿಂಪಡೆಯಬೇಕು’ ಎಂದು ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.ಪ್ರಮುಖರಾದ ವಿಲಾಸ ಮೋರೆ, ಮನೋಹರ ಮೋರೆ, ಪ್ರಕಾಶ ಭಾವಿಕಟ್ಟೆ, ಮಾರುತಿ ಬೌದ್ಧೆ, ರಮೇಶ ಬೆಲ್ದಾರ, ಅಶೋಕ ಗಾಯಕವಾಡ, ಶಿವಕುಮಾರ ಮೇತ್ರೆ, ಸಂಜುಕುಮಾರ ಭಾವಿಕಟ್ಟೆ, ಕೈಲಾಸ ಭಾವಿಕಟ್ಟೆ, ವಿಲಾಸ ಎ.ಮೋರೆ, ರಾಜಕುಮಾರ ಬೌದ್ಧೆ, ಜೈಪಾಲ್‌ ಬೊರಾಳೆ, ಚಂದ್ರಕಾಂತ ಪ್ಯಾಗೆ, ಕಿರಣ ಪ್ಯಾಗೆ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry