₹ 5 ಲಕ್ಷ ಮೌಲ್ಯದ ಅಫೀಮು ವಶ

7

₹ 5 ಲಕ್ಷ ಮೌಲ್ಯದ ಅಫೀಮು ವಶ

Published:
Updated:

ಧೂಳಖೇಡ: ಲಾರಿಯಲ್ಲಿ ಅಫೀಮು ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಪೊಲೀಸರು, ₹ 5 ಲಕ್ಷ ಮೌಲ್ಯದ 30 ಕೆ.ಜಿ. ಅಫೀಮನ್ನು ಗ್ರಾಮದ ಬಳಿ ಗುರುವಾರ ವಶಪಡಿಸಿಕೊಂಡಿದ್ದಾರೆ.

ಹರಿಯಾಣದ ಲಾರಿ ಚಾಲಕ ಗಣೇಶ್‌ (32)ನನ್ನು ಅಫೀಮು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿ, ವಿಚಾರಣೆಗೊಳಪಡಿಸಲಾಗಿದೆ ಎಂದು ವಿಜಯಪುರ ಜಿಲ್ಲಾ ಅಬಕಾರಿ ಉಪ ಆಯುಕ್ತ ವೆಂಕಟೇಶ ಪದಕಿ ತಿಳಿಸಿದ್ದಾರೆ.

ಹರಿಯಾಣದಿಂದ ರಾಜ್ಯ ಪ್ರವೇಶಿಸಿದ ಲಾರಿಯನ್ನು ಅಬಕಾರಿ ಪೊಲೀಸರು ಚಡಚಣ ತಾಲ್ಲೂಕಿನ ಧೂಳಖೇಡ ಗ್ರಾಮದ ಬಳಿಯಿರುವ ಹಳೆಯ ಸೇಲ್ಸ್‌ ಟ್ಯಾಕ್ಸ್‌ ಕಚೇರಿ ಮುಂಭಾಗ ವಶಕ್ಕೆ ಪಡೆದು, ಪರಿಶೀಲನೆ ನಡೆಸಿದಾಗ ಅಫೀಮು ಪತ್ತೆಯಾಗಿದೆ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry