142 ಗೋಡೆ ಗಡಿಯಾರ ವಶ

7

142 ಗೋಡೆ ಗಡಿಯಾರ ವಶ

Published:
Updated:

ಕೊಳ್ಳೇಗಾಲ: ಹನೂರು ಕ್ಷೇತ್ರದ ಬಿಜೆಪಿ ಮುಖಂಡ ಆರ್.ಮಂಜುನಾಥ್ ಅವರ ಭಾವಚಿತ್ರ ಹಾಗೂ ಪಕ್ಷದ ಚಿಹ್ನೆ ಇರುವ 142 ಗೋಡೆ ಗಡಿಯಾರಗಳನ್ನು ಚುನಾವಣಾಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದಾರೆ.

ಇಲ್ಲಿನ ಮಧುವನಹಳ್ಳಿಯ ಶಿವರಾಜು ಎಂಬುವರ ಅಂಗಡಿ ಮೇಲೆ ಸೆಕ್ಟರ್‌ ಮ್ಯಾಜಿಸ್ಟ್ರೇಟ್ ಸರಿತಾ ಕುಮಾರಿ ಅವರ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದರು. ಈ ಗಡಿಯಾರಗಳನ್ನು ಮತದಾರರಿಗೆ ಹಂಚಲು ತರಲಾಗಿತ್ತು ಎಂದು ಆರೋಪಿಸಲಾಗಿದೆ.ಅಂಗಡಿ ಮಾಲೀಕ ಶಿವರಾಜು, ಆರ್.ಮಂಜುನಾಥ್, ಬಸವಶೆಟ್ಟಿ ವಿರುದ್ಧ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry