ಬಿಜೆಪಿ ಸೋಲಿಸುವುದೇ ಗುರಿ: ಶರದ್ ಯಾದವ್‌‌‌

7

ಬಿಜೆಪಿ ಸೋಲಿಸುವುದೇ ಗುರಿ: ಶರದ್ ಯಾದವ್‌‌‌

Published:
Updated:
ಬಿಜೆಪಿ ಸೋಲಿಸುವುದೇ ಗುರಿ: ಶರದ್ ಯಾದವ್‌‌‌

ಬೆಂಗಳೂರು: 'ಮುಂದಿನ ಲೋಕಸಭೆ ಚುನಾವಣೆಗೆ ಕರ್ನಾಟಕದ ಚುನಾವಣೆ ಸೆಮಿಫೈನಲ್ ಇದ್ದಂತೆ, ಇಲ್ಲಿ ಬಿಜೆಪಿ ಸೋಲಿಸುವುದೇ ನಮ್ಮ ಗುರಿ' ಎಂದು ಜೆಡಿಯು ಮುಖ್ಯಸ್ಥ ಶರದ್ ಯಾದವ್ ಹೇಳಿದರು.

'ಕರ್ನಾಟಕದ ಚುನಾವಣೆಯನ್ನು ಇಡೀ ದೇಶದ ಜನ ನೋಡುತ್ತಿದ್ದಾರೆ.  ದೇಶದಲ್ಲಿ ಬಿಜೆಪಿಯನ್ನು ಹೊಡೆದೋಡಿಸಬೇಕು. ಬಿಜೆಪಿ ಮುಕ್ತ ಭಾರತ ಮಾಡಬೇಕು. ಅದಕ್ಕಾಗಿಯೇ ರಾಜ್ಯಕ್ಕೆ ಬಂದಿದ್ದೇನೆ' ಎಂದು ಶುಕ್ರವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

'ಕಾಂಗ್ರೆಸ್ ಬೆಂಬಲಿಸಬೇಕೋ, ಜೆಡಿಎಸ್ ಬೆಂಬಲಿಸಬೇಕೊ ಎಂಬುದರ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಎರಡು ದಿನ ಇಲ್ಲೇ ಇರುತ್ತೇನೆ. ಪಕ್ಷದ ಕಾರ್ಯಕರ್ತರ ಜತೆ ಚರ್ಚಿಸಿ ಮಾಧ್ಯಮಗಳಿಗೆ ತಿಳಿಸುತ್ತೇ‌ನೆ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry