ಕಾಂಗ್ರೆಸ್‍ನಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಜಗದೀಶ ಶೆಟ್ಟರ್ ಆರೋಪ

7

ಕಾಂಗ್ರೆಸ್‍ನಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಜಗದೀಶ ಶೆಟ್ಟರ್ ಆರೋಪ

Published:
Updated:
ಕಾಂಗ್ರೆಸ್‍ನಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಜಗದೀಶ ಶೆಟ್ಟರ್ ಆರೋಪ

ಹುಬ್ಬಳ್ಳಿ: ಅನಿಲ ಭಾಗ್ಯ ತರಲು ಮುಂದಾಗಿರುವ ಕಾಂಗ್ರೆಸ್ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದೆ ಎಂದು ಜಗದೀಶ ಶೆಟ್ಟರ್ ಆರೋಪ ಮಾಡಿದ್ದಾರೆ.

ಕೇಂದ್ರ ಸರ್ಕಾರದ ಉಜ್ವಲ ಯೋಜನೆಗೆ ಸಿಕ್ಕ ಜನಬೆಂಬಲದಿಂದ ಪ್ರೇರಣೆಗೊಂಡು ಅನಿಲ ಭಾಗ್ಯ ಯೋಜನೆ ಘೋಷಿಸಿತು. ಈಗ ಸುಮಾರು ಒಂದು ಲಕ್ಷ ಸ್ಟೌ ವಿತರಣೆ ಮಾಡಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕೂಡಲೇ ಇವುಗಳನ್ನು ಇಟ್ಟಿರುವ ಗೋದಾಮುಗಳಿಗೆ ಚುನಾವಣಾ ಆಯೋಗ ಬೀಗ ಹಾಕಬೇಕು ಎಂದು ಅವರು ಒತ್ತಾಯಿಸಿದರು. ಈ ಸಂಬಂಧ ಬಿಜೆಪಿ ವತಿಯಿಂದ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಶೆಟ್ಟರ್ ತಿಳಿಸಿದರು. 

ಸಿಲಿಂಡರ್, ಸ್ಟೌ ಸೇರಿದಂತೆ ಒಂದು ಅಡುಗೆ ಅನಿಲ ಸಂಪರ್ಕಕ್ಕೆ ₹3,700 ಖರ್ಚಾಗುತ್ತದೆ. ಆದರೆ, ಸಿದ್ದರಾಮಯ್ಯ ಸರ್ಕಾರ ₹4,500 ವೆಚ್ಚ ಮಾಡಿದ್ದು, ಅಡುಗೆ ಅನಿಲ ವಿತರಣೆಗೆ ಸಿದ್ಧತೆ ನಡೆಸುತ್ತಿದ್ದಾರೆ ಧಾರವಾಡ ಸಂಸದ ಪ್ರಹ್ಲಾದ ಜೋಶಿ ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry