ಬಾವಿಗೆ ಬಿದ್ದ ಚಿರತೆ ರಕ್ಷಣೆ

7

ಬಾವಿಗೆ ಬಿದ್ದ ಚಿರತೆ ರಕ್ಷಣೆ

Published:
Updated:
ಬಾವಿಗೆ ಬಿದ್ದ ಚಿರತೆ ರಕ್ಷಣೆ

ಕುಣಿಗಲ್: ತಾಲ್ಲೂಕಿನ ಕಲ್ಲುಪಾಳ್ಯ ಗ್ರಾಮದ ಗೋವಿಂದಯ್ಯ ಅವರಿಗೆ ಸೇರಿದ 30 ಅಡಿ ಆಳದ ಬಾವಿಯಲ್ಲಿ ಬುಧುವಾರ ರಾತ್ರಿ ಚಿರತೆ ಬಿದ್ದಿದೆ.

ನೀರಿಲ್ಲದ 30 ಅಡಿ ಆಳದ ಬಾವಿಯಿಂದ ಚಿರತೆ ಚೀರಾಡುತ್ತಿದ್ದ ಸದ್ದು ಕೇಳಿದ ಗ್ರಾಮಸ್ಥರು ವಲಯ ಅರಣ್ಯಾಧಿಕಾರಿ ರವಿ ಅವರಿಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಧಾವಿಸಿದ ವಲಯ ಅರಣ್ಯಾಧಿಕಾರಿ ಮತ್ತು ತಂಡದವರು ಗ್ರಾಮಸ್ಥರನ್ನು ದೂರ ಸರಿಸಿ ಬಾವಿಗೆ ಏಣಿ ಇಳಿಸಿದ ಕಾರಣ ಏರಿ ಬಂದ ಚಿರತೆ ತರದಕುಪ್ಪೆ ಅರಣ್ಯ ಪ್ರದೇಶಕ್ಕೆ ಓಡಿ ಹೋಯಿತು ಎಂದು ಅಧಿಕಾರಿ ರವಿ ಹೇಳಿದರು.

ಕಳೇಬರ ಪತ್ತೆ: ತಾಲ್ಲೂಕಿನ ಅಮೃತೂರು ಹೋಬಳಿ ಕೀಲಾರ ಗ್ರಾಮದ ಬಳಿ ಚಿರತೆಯ ಕಳೆಬರ ಪತ್ತೆಯಾಗಿದೆ. ಚಿರತೆಯ ಸಹಜ ಸಾವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry