3

‘ಚುನಾವಣೆಗೆ ಸಕಲ ಸಿದ್ಧತೆ’

Published:
Updated:
‘ಚುನಾವಣೆಗೆ ಸಕಲ ಸಿದ್ಧತೆ’

ಸೊರಬ: ಸೊರಬ ವಿಧಾನಸಭಾ ಕ್ಷೇತ್ರಕ್ಕೆ ಮೇ 12ರಂದು ನಡೆಯಲಿರುವ ಚುನಾವಣೆಗೆ ಎಲ್ಲಾ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಾಲ್ಲೂಕು ಚುನಾವಣಾಧಿಕಾರಿ ಎಚ್.ವಿ. ಮಂಜುನಾಥ ತಿಳಿಸಿದರು.

ಗುರುವಾರ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಮಾಹಿತಿ ನೀಡಿ ಮಾತನಾಡಿದ ಅವರು, ‘ತಾಲ್ಲೂಕಿನಲ್ಲಿ ತಾಳಗುಪ್ಪ ಸೇರಿದಂತೆ 2 ಸಹಾಯಕ ಮತಗಟ್ಟೆಯನ್ನೊಳಗೊಂಡಂತೆ ಒಟ್ಟು 238 ಮತಗಟ್ಟೆಗಳಿದ್ದು, 21 ಜನಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಇವರು ಈಗಾಗಲೇ ಮತಗಟ್ಟೆಗಳ ಮೂಲ ಸೌಕರ್ಯಗಳ ಬಗ್ಗೆ ವರದಿ ನೀಡಿದ್ದಾರೆ’ ಎಂದರು.

ಚುನಾವಣಾ ಆಯೋಗದ ಆದೇಶದಂತೆ ಮಾರ್ಚ್‌ 27ರಂದು ಆದೇಶ ಬಂದಾಗಿನಿಂದ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಫ್ಲೈಯಿಂಗ್ ಸ್ಕ್ವಾಡ್ (ಎಫ್‌ಎಸ್‌ಟಿ) 3, ಸ್ಟ್ಯಾಟಿಗ್ ಸರ್ವೆಲೆನ್ಸ್ ಟೀಮ್ (ಎಸ್‌ಎಸ್‌ಟಿ) ಒಂದು, ಅಕೌಂಟಿಂಗ್ ಟೀಂ ಹಾಗೂ ತಾಲ್ಲೂಕು ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ. ಇಒ ಬಸವರಾಜ ಹೆಗ್ಗನಾಯಕ ಅವರು ನೋಡಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ಇದರ ಜೊತೆಯಲ್ಲಿ ಸಹಾಯಕ ಎಕ್ಸಪೆಂಡೇಚರ್ ವೀಕ್ಷಕರು, ವಿಡಿಯೊ ಸರ್ವೆಲೆನ್ಸ್ ಟೀಂ (ವಿಎಸ್‌ಟಿ) ಗಳು ಕಾರ್ಯನಿರ್ವಹಿಸುತ್ತವೆ ಎಂದರು.

ಭಾರಂಗಿ, ಶಕುನವಳ್ಳಿ, ಅಗಸನಹಳ್ಳಿ, ಹರೀಶಿಯಲ್ಲಿ ಚೆಕ್‌ಪೋಸ್ಟ್ ತೆರೆಯಲು ಇಂದಿನಿಂದಲೇ ಕ್ರಮ ಕೈಗೊಳ್ಳಲಾಗುವುದು. ಜಾತ್ರೆ, ಮದುವೆ ಮತ್ತು ಗೃಹಪ್ರವೇಶಗಳಂತಹ ಸಮಾರಂಭಗಳಿಗೆ ರಾಜಕೀಯ ವ್ಯಕ್ತಿಗಳು ಬರುವ ಸಂಭವವಿದ್ದಲ್ಲಿ ಅದರ ಬಗ್ಗೆ ಮೊದಲೇ ಮಾಹಿತಿಯನ್ನು ನೀಡಬೇಕು. ಹಾಗೂ ಆಯೋಜಕರು ಅಲ್ಲಿ ಯಾವುದೇ ರಾಜಕೀಯ ಚಟುವಟಿಕೆ ನಡೆಯದಂತೆ ನೋಡಿಕೊಳ್ಳಬೇಕು. ಯಾವುದೇ ಧಾರ್ಮಿಕ ಕಾರ್ಯಗಳಿಗೆ ಅಡ್ಡಿಪಡಿಸುವುದಿಲ್ಲ. ಸಾರ್ವಜನಿಕರು ಚುನಾವಣಾ ನೀತಿ ಸಂಹಿತೆಗೆ ಅನುಗುಣವಾಗಿ ಮತದಾನಕ್ಕೆ ಸಹಕರಿಸುವಂತೆ ಮನವಿ ಮಾಡಿದರು.

ದೂರವಾಣಿ ಸಂಖ್ಯೆ 08184– 272241, ಮೊಬೈಲ್ ಸಂಖ್ಯೆ 95383 94298ಕ್ಕೆ ಮಾಹಿತಿ ನೀಡಬಹುದು ಎಂದರು.

ನೋಡಲ್ ಅಧಿಕಾರಿ ಬಸವರಾಜ ಹೆಗ್ಗನಾಯಕ, ಸುರೇಶ, ಚುನಾವಣಾ ಸಿಬ್ಬಂದಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry