ರೋಹಿಂಗ್ಯಾ ಮುಸ್ಲಿಮರಿಗೆ ವಸತಿ ನೀಡದಂತೆ ಮನವಿ

7
ಲಕ್ಷ್ಮೇಶ್ವರದಲ್ಲಿ ರಾಷ್ಟ್ರೀಯ ಹಿಂದೂ ಆಂದೋಲನ ಆಗ್ರಹ

ರೋಹಿಂಗ್ಯಾ ಮುಸ್ಲಿಮರಿಗೆ ವಸತಿ ನೀಡದಂತೆ ಮನವಿ

Published:
Updated:

ಲಕ್ಷ್ಮೇಶ್ವರ: ‘ಹೈದರಾಬಾದ್‌ನ ಬಾಲಾಪುರದಲ್ಲಿ ಅಲ್ಲಿನ ಸರ್ಕಾರವು ಕಾನೂನುಬಾಹಿರವಾಗಿ ರೋಹಿಂಗ್ಯಾ ಮುಸ್ಲಿಮರಿಗೆ 108 ಮನೆ ನಿರ್ಮಿಸಿ, ಹಂಚಿಕೆ ಮಾಡಿರುವುದನ್ನು ಕೂಡಲೇ ರದ್ದುಗೊಳಿಸಬೇಕು’ ಎಂದು ಆಗ್ರಹಿಸಿ ರಾಷ್ಟ್ರೀಯ ಹಿಂದೂ ಆಂದೋಲನದ ಕಾರ್ಯಕರ್ತರು ಉಪ ತಹಶೀಲ್ದಾರ್ ಎಲ್.ಎಸ್.ಹನಸಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಸರ್ಕಾರ ಹಜ್ ಯಾತ್ರೆಗೆ ನೀಡುತ್ತಿದ್ದ ಅನುದಾನ ರದ್ದುಗೊಳಿಸಿತ್ತು. ಆದರೆ, ಫೆ.27ರಂದು ವಿಮಾನದಲ್ಲಿ ಹೋಗುವ ಹಜ್‌ ಯಾತ್ರಿಕರಿಗೆ ಶೇ 15ರಿಂದ 45ರಷ್ಟು ರಿಯಾಯತಿ ನೀಡಿ ಮುಸ್ಲಿಮರನ್ನು ಓಲೈಕೆ ಮಾಡಿರುವುದು ಖಂಡನೀಯ. ಇದರಿಂದ ‘ಏರ್ ಇಂಡಿಯಾ’ ಸಂಸ್ಥೆಯ ಮೇಲೆ ಸಾಕಷ್ಟು ಹೊರೆ ಬೀಳುತ್ತದೆ. ನಷ್ಟದಲ್ಲಿರುವ ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸಲು ಯೋಚಿಸುತ್ತಿರುವ ಸಂದರ್ಭದಲ್ಲಿ ಹಜ್ ಯಾತ್ರಿಕರಿಗೆ ರಿಯಾಯತಿ ನೀಡಿ ಸಂಸ್ಥೆಯನ್ನು ಮತ್ತಷ್ಟು ನಷ್ಟಕ್ಕೆ ಗುರಿ ಮಾಡುವುದು ಸರಿಯಲ್ಲ’ ಎಂದು ಆಗ್ರಹಿಸಿದರು.

‘ಜತೆಗೆ ಹಿಂದೂಗಳ ಅಮರನಾಥ ಯಾತ್ರೆಗೂ ಅನುದಾನ ನೀಡಬೇಕು. ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ರೋಹಿಂಗ್ಯಾ ಮುಸ್ಲಿಮರಿಗೆ ಮನೆ ನಿರ್ಮಿಸಿಕೊಳ್ಳಲು ಅನುಮತಿ ನೀಡಲಾಗಿದೆ. ಜತೆಗೆ ಜಮ್ಮು ಕಾಶ್ಮೀರದಲ್ಲಿ ಮನೆ ನಿರ್ಮಿಸಿಕೊಳ್ಳಲು ಅನುಮತಿ ನೀಡಿರುವುದು 370 ಕಲಂನ ಕಾನೂನು ಉಲ್ಲಂಘನೆ ಆಗಿದೆ. ಸರ್ಕಾರ ಕೂಡಲೇ ರೋಹಿಂಗ್ಯಾ ಮುಸ್ಲಿಮರನ್ನು ಹೊರ ಹಾಕಬೇಕು’ ಎಂದು ಒತ್ತಾಯಿಸಿದರು.

ಡಿ.ಕೆ.ನಾಗರಾಜ, ಅಮರೀಶ ಗಾಂಜಿ, ದ್ಯಾಮನಗೌಡ ಪಾಟೀಲ, ರಾಜಶೇಖರಯ್ಯ ಶಿಗ್ಲಿಮಠ, ಕೊಟ್ರೇಶ ಅಳವಂಡಿ, ಗೂಳಪ್ಪ ಕರಿಗಾರ, ಸಂತೋಷ ಕುಂಬಾರ, ಯಲ್ಲಪ್ಪಗೌಡ ಪಾಟೀಲ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry