ತಂತ್ರಜ್ಞಾನ ಅಳವಡಿಕೆ ಕಡ್ಡಾಯ

7

ತಂತ್ರಜ್ಞಾನ ಅಳವಡಿಕೆ ಕಡ್ಡಾಯ

Published:
Updated:

ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಉದ್ಯೋಗ ಕ್ಷೇತ್ರಗಳನ್ನು ಬಲಗೊಳಿಸುತ್ತೇನೆ. ಎಲ್ಲ ಸಚಿವರು ಮೊಬೈಲ್ ಆ್ಯಪ್ ಆರಂಭಿಸುವುದನ್ನು ಕಡ್ಡಾಯ ಮಾಡುತ್ತೇನೆ. ಅದರಲ್ಲಿ ಅವರು ಮಾಡುವ ಕೆಲಸವನ್ನು ಜನರ ಮುಂದಿಡುವಂತೆ ಮಾಡುತ್ತೇನೆ. ಆಡಳಿತ ವ್ಯವಸ್ಥೆ ಪಾರದರ್ಶಕವಾಗಿ ನಡೆಯುವಂತೆ ಮಾಡುತ್ತೇನೆ.

ಲಂಚ, ಅತ್ಯಾಚಾರ, ಸಮಾಜ ವಿರೋಧಿ ಚಟುವಟಿಕೆಗಳ ಕಡಿವಾಣಕ್ಕೆ ಕಠಿಣ ನಿಯಮ ಜಾರಿಗೊಳಿಸುವೆ. ಪ್ರತಿ ತಿಂಗಳು ಶಾಲೆ, ಕಾಲೇಜು, ಹಳ್ಳಿಯಲ್ಲಿ ಸಚಿವರೊಂದಿಗಿನ ಚರ್ಚೆಗೆ ವ್ಯವಸ್ಥೆ  ಮಾಡುತ್ತೇನೆ. ಎಲ್ಲಾ ಕ್ಷೇತ್ರಗಳಲ್ಲೂ ಆಧುನಿಕ ತಂತ್ರಜ್ಞಾನ ಅಳವಡಿಕೆಯನ್ನು ಕಡ್ಡಾಯ ಮಾಡುತ್ತೇನೆ. ಮಳೆ ನೀರು ಮತ್ತು ಸಮುದ್ರದ ನೀರನ್ನು ಸಮರ್ಥವಾಗಿ ಬಳಕೆಯಾಗುವಂತೆ ಮಾಡುತ್ತೇನೆ.

– ಸದಾಶಿವ್ ಸೊರಟೂರು, ಚಿಂತಾಮಣಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry