ಮಮ್ಮುಟ್ಟಿ ಗೇಮ್‌ ಥ್ರಿಲ್ಲರ್‌

7

ಮಮ್ಮುಟ್ಟಿ ಗೇಮ್‌ ಥ್ರಿಲ್ಲರ್‌

Published:
Updated:
ಮಮ್ಮುಟ್ಟಿ ಗೇಮ್‌ ಥ್ರಿಲ್ಲರ್‌

ಮಲಯಾಳಂನ ಖ್ಯಾತ ಚಿತ್ರಕತೆಗಾರ ಕಲೂರ್‌ ಡೆನ್ನಿಸ್‌ ಅವರ ಮಗ ದೀನ್‌ ಡೆನ್ನಿಸ್‌ ಈಗ ನಿರ್ದೇಶಕರಾಗಲು ಹೊರಟಿದ್ದಾರೆ. ಈ ಚಿತ್ರದಲ್ಲಿ ನಟ ಮಮ್ಮುಟ್ಟಿ ಅವರು ನಾಯಕ ನಟರಾಗಿ ನಟಿಸಲಿದ್ದಾರೆ. ಅತಿ ಹೆಚ್ಚು ಬಂಡವಾಳದ ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲವಾದರೂ ಇದು ಮಲಯಾಳಂನಲ್ಲಿ ನಿರ್ಮಾಣವಾಗುತ್ತಿರುವ ‘ಮೊದಲ ಗೇಮ್‌ ಥ್ರಿಲ್ಲರ್‌ ಸಿನಿಮಾ’ ಎಂದು ಚಿತ್ರತಂಡ ಹೇಳಿದೆ.

ಈ ಚಿತ್ರಕ್ಕೆ ಡೀನ್‌ ಡೆನ್ನಿಸ್‌ ಅವರೇ ಚಿತ್ರಕತೆ ಬರೆಯುತ್ತಿದ್ದಾರೆ. ‘ಇಡೀ ಚಿತ್ರ ಕಳ್ಳ– ಪೊಲೀಸ್‌ ಆಟದಂತೆ ಇರಲಿದೆ. ಇಂತಹ ಚಿತ್ರ ಮಲಯಾಳಿ ಭಾಷೆಯಲ್ಲಿ ಮೊದಲ ಬಾರಿಗೆ ನಿರ್ಮಾಣವಾಗುತ್ತಿದೆ. ಈ ಚಿತ್ರದ ಬಗ್ಗೆ ಇನ್ನು ಹೆಚ್ಚಿಗೆ ಹೇಳಿದರೆ ಸ್ವಾರಸ್ಯ ಇರುವುದಿಲ್ಲ’ ಎಂದು ಡೀನ್‌ ಡೆನ್ನಿಸ್‌ ಹೇಳಿದರೂ ಚಿತ್ರದ ಕತೆಯನ್ನು ಬಿಚ್ಚಿಟ್ಟಿದ್ದಾರೆ

‘ಕೊಚ್ಚಿ ನಗರದಲ್ಲಿ ಅನಿರೀಕ್ಷಿತ ಘಟನೆಗಳು ನಡೆಯುತ್ತಲೇ ಇರುತ್ತವೆ. ಈ ಚಿತ್ರದಲ್ಲಿ ಮಮ್ಮುಟ್ಟಿ 39 ವರ್ಷದ ವಯಸ್ಸಿನ ಪ್ರೌಢ ಪಾತ್ರದಲ್ಲಿ ನಟಿಸಿದ್ದಾರೆ. ವಿನೋದ್‌ ಎಂಬ ಪಾತ್ರಧಾರಿ ಕೊಚ್ಚಿಯಿಂದ ಪ್ರಯಾಣ ಆರಂಭಿಸುತ್ತಾನೆ. ಮಾರ್ಗ ಮಧ್ಯದಲ್ಲಿ ಅನೇಕ ಜನರನ್ನು, ಅನಿರೀರಿಕ್ಷಿತ ಘಟನೆಗಳನ್ನು ಎದುರುಗೊಳ್ಳುತ್ತಾನೆ. ಆತನಿಗೆ ಮತ್ತು ಆ ಘಟನೆಗಳಿಗೆ ಸಂಬಂಧ ಏನು ಎಂಬುದೇ ಸಿನಿಮಾ ಕತೆ’ ಎಂದು ವಿವರಣೆ ನೀಡುತ್ತಾರೆ. ಈ ಚಿತ್ರದಲ್ಲಿ ಆ್ಯಕ್ಷನ್‌, ಡ್ರಾಮಾ, ರೊಮ್ಯಾನ್ಸ್‌, ಹಾಸ್ಯ ಮತ್ತು ಸಾಹಸ ದೃಶ್ಯಗಳು ಇರಲಿವೆಯಂತೆ. ಚಿತ್ರದ ಚಿತ್ರೀಕರಣ ಕೊಚ್ಚಿ ಹಾಗೂ ಬೆಂಗಳೂರಿನಲ್ಲಿ ನಡಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry