ಬ್ಲೂಸ್ಟಾರ್‌: 40 ಇನ್‌ವರ್ಟರ್‌ ಸ್ಪ್ಲಿಟ್‌ ಏ.ಸಿ ಮಾರುಕಟ್ಟೆಗೆ

7

ಬ್ಲೂಸ್ಟಾರ್‌: 40 ಇನ್‌ವರ್ಟರ್‌ ಸ್ಪ್ಲಿಟ್‌ ಏ.ಸಿ ಮಾರುಕಟ್ಟೆಗೆ

Published:
Updated:

ಬೆಂಗಳೂರು: ಹವಾ ನಿಯಂತ್ರಣ ಮತ್ತು ನೀರು ಶುದ್ಧೀಕರಣ ಯಂತ್ರಗಳ ತಯಾರಿಕಾ ಸಂಸ್ಥೆ ಬ್ಲೂಸ್ಟಾರ್, ಅತ್ಯಧಿಕ ವಿದ್ಯುತ್ ಕ್ಷಮತೆಯ 40 ಹೊಸ 3 ಸ್ಟಾರ್‌ ಹಾಗೂ 5 ಸ್ಟಾರ್‌ ಇನ್‌ವರ್ಟರ್‌ ಸ್ಪ್ಲಿಟ್‌ ಏರ್ ಕಂಡೀಷನರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಮೂಲಕ ಒಟ್ಟಾರೆ 100 ಹವಾ ನಿಯಂತ್ರಕಗಳನ್ನು ಹೊಂದಿದ ಮೈಲುಗಲ್ಲು ಸೃಷ್ಟಿಸಿದೆ.

ಈ ಸಾಧನಗಳು ಶೇ 30ರವರೆಗೂ ಹೆಚ್ಚು  ಕೂಲಿಂಗ್‌, ವೇಗವಾಗಿ ಉಷ್ಣತೆ ಕಡಿಮೆ ಮಾಡುವ ಹಾಗೂ ಹೆಚ್ಚು ವಿದ್ಯುತ್ ಉಳಿಸುವ ಸಾಮರ್ಥ್ಯ ಹೊಂದಿವೆ. ಧ್ವನಿ ನಿರೋಧಕಕ್ಕಾಗಿ ಕಂಪ್ರೆಸರ್‌ಗೆ ಅಕಾಸ್ಟಿಕ್‌ ಜಾಕೆಟ್‌ ಬಳಸಲಾಗಿದೆ. ಗಾಳಿಯನ್ನು ಹೆಚ್ಚು ಶುದ್ಧಗೊಳಿಸುವ ತಂತ್ರಜ್ಞಾನವನ್ನು ಬಳಸಲಾಗಿದೆ.

‘75ನೇ ವರ್ಷಕ್ಕೆ ಕಾಲಿಡುತ್ತಿರುವ ಸಂಸ್ಥೆಯು, 2011ರಲ್ಲಿ ಗೃಹ ಬಳಕೆಯ ಹವಾ ನಿಯಂತ್ರಕಗಳ ಉದ್ದಿಮೆಯನ್ನು ಪ್ರವೇಶಿಸಿತು. ನಂತರ ದೂರಗಾಮಿ ಕಾರ್ಯಾಚರಣೆಯ ಮೂಲಕ ವರ್ಷದಿಂದ ವರ್ಷಕ್ಕೆ ತನ್ನ ಸಾಮರ್ಥ್ಯವನ್ನು ವೃದ್ಧಿಸುತ್ತಾ, ಸದ್ಯ ಶೇ 11.5 ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. 2018–19ರಲ್ಲಿ ಇದು ಶೇ 12.5 ರಷ್ಟಕ್ಕೆ ಏರಿಕೆ ಆಗುವ ನಿರೀಕ್ಷೆ ಇದೆ’ ಎಂದು ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಬಿ. ತ್ಯಾಗರಾಜನ್‌ ಅವರು ಸುದ್ದಿಗೋಷ್ಠಿ

ಯಲ್ಲಿ ತಿಳಿಸಿದ್ದಾರೆ.

2018–19ರಲ್ಲಿ ₹ 40 ಕೋಟಿ ಹೂಡಿಕೆ ಮಾಡಲಾಗಿದೆ. ಸದ್ಯ 150 ಮಳಿಗೆಗಳಿದ್ದು, 2018–19ರಲ್ಲಿ ಒಟ್ಟು ಮಳಿಗೆಗಳ ಸಂಖ್ಯೆಯನ್ನು 200ಕ್ಕೆ ಹೆಚ್ಚಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry