ಯೂರಿಯಾ: ಕಮಿಷನ್ ಹೆಚ್ಚಳ

7

ಯೂರಿಯಾ: ಕಮಿಷನ್ ಹೆಚ್ಚಳ

Published:
Updated:

ನವದೆಹಲಿ: ಯೂರಿಯಾ ವಿತರಕರು ಮತ್ತು ಮಾರಾಟಗಾರರ ಕಮಿಷನ್‌ ಮೊತ್ತವನ್ನು ಪ್ರತಿ ಟನ್‌ಗೆ ₹ 354 ರಂತೆ ಏರಿಕೆ ಮಾಡಲಾಗಿದೆ.

ಪಿಒಎಸ್‌ ಮಷಿನ್ ಬಳಸಿ ಯೂರಿಯಾ ಮಾರಾಟ ಮಾಡುವವರಿಗೆ ಮಾತ್ರವೇ ಈ ಕಮಿಷನ್‌ ನೀಡಲಾಗುವುದು.  ಈ ನಿರ್ಧಾರದಿಂದ ಯೂರಿಯಾ ಸಬ್ಸಿಡಿಯನ್ನು ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಜಾರಿಗೆ ತರಲು ಅನುಕೂಲವಾಗಲಿದೆ ಎಂದು ರಸಗೊಬ್ಬರ ಸಚಿವಾಲಯ ತಿಳಿಸಿದೆ.

ಸದ್ಯ, ಖಾಸಗಿ ಸಂಸ್ಥೆಗಳು ಮತ್ತು ಸಹಕಾರಿ ಸಂಸ್ಥೆಗಳಿಗೆ ಪ್ರತಿ ಟನ್‌ಗೆ ₹ 180 ರಂತೆ ಹಾಗೂ ಸಾಂಸ್ಥಿಕ ಸಂಸ್ಥೆಗಳಿಗೆ ಪ್ರತಿ ಟನ್‌ಗೆ ₹ 200 ರಂತೆ ಕಮಿಷನ್ ನೀಡಲಾಗುತ್ತಿದೆ.

ಪರಿಷ್ಕೃತ ಕಮಿಷನ್‌ ದರ ಏಪ್ರಿಲ್‌ ಒಂದರಿಂದ ಜಾರಿಗೆ ಬರಲಿದ್ದು, ಖಾಸಗಿ ಮತ್ತು ಸಾಂಸ್ಥಿಕ ಸಂಸ್ಥೆಗಳಿಗೆ ಅನ್ವಯವಾಗಲಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಈ ನಿರ್ಧಾರದಿಂದ ಸರ್ಕಾರದ ಬೊಕ್ಕಸಕ್ಕೆ ಒಂದು ವರ್ಷಕ್ಕೆ ₹ 515 ಕೋಟಿ ಹೆಚ್ಚುವರಿ ಹೊರೆಯಾಗುವ ಅಂದಾಜು ಮಾಡಲಾಗಿದೆ.

ರಸಗೊಬ್ಬರ ಸಬ್ಸಿಡಿ ನೀಡುತ್ತಿರುವುದರಿಂದ ಪ್ರತಿ ವರ್ಷ ಸರ್ಕಾರಕ್ಕೆ ₹ 70,000 ಕೋಟಿಗಳಷ್ಟು ಹೊರೆಯಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry