ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ ಪಠಾಣ್‌ ಕೋಚ್‌

7

ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ ಪಠಾಣ್‌ ಕೋಚ್‌

Published:
Updated:
ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ ಪಠಾಣ್‌ ಕೋಚ್‌

ಶ್ರೀನಗರ: ಭಾರತದ ಹಿರಿಯ ಆಲ್‌ರೌಂಡ್ ಆಟಗಾರ ಇರ್ಪಾನ್ ಪಠಾಣ್ ಅವರನ್ನು ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ ಶುಕ್ರವಾರ ಕೋಚ್ ಹಾಗೂ ಸಲಹೆಗಾರ ಹುದ್ದೆಗೆ ನೇಮಕಮಾಡಿಕೊಂಡಿದೆ.

ಜಮ್ಮು ಮತ್ತು ಕಾಶ್ಮೀರ ರಾಜ್ಯದ ಸೀನಿಯರ್ ತಂಡಕ್ಕೆ ಕೋಚ್‌ ಆಗಿ ಪಠಾಣ್‌ ಮಾರ್ಗದರ್ಶನ ಮಾಡಲಿದ್ದಾರೆ.

‘ಒಂದು ವರ್ಷದ ಅವಧಿಗೆ ಪಠಾಣ್ ಅವರು ನಮ್ಮ ತಂಡದೊಂದಿಗೆ ಕೆಲಸ ಮಾಡಲಿದ್ದಾರೆ’ ಎಂದು ಜಮ್ಮು ಮತ್ತು ಕಾಶ್ಮೀರ ಸಂಸ್ಥೆಯ ಸಿಇಒ ಆಶಿಕ್‌ ಹೇಳಿದ್ದಾರೆ. ಪಠಾಣ್ ಅವರು ಬರೋಡ ತಂಡದ ನಾಯಕರಾಗಿದ್ದರು.

ಷೇರ್‌ ಎ ಕಾಶ್ಮೀರ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುತ್ತಿದ್ದ ಯುವ ಆಟಗಾರರಿಗೆ ಪಠಾಣ್ ಕಿವಿಮಾತು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry