ಮಲಾಲ ಭೇಟಿ: ಗೋಪ್ಯತೆ ಕಾಪಾಡಿದ ಪಾಕ್‌

6

ಮಲಾಲ ಭೇಟಿ: ಗೋಪ್ಯತೆ ಕಾಪಾಡಿದ ಪಾಕ್‌

Published:
Updated:
ಮಲಾಲ ಭೇಟಿ: ಗೋಪ್ಯತೆ ಕಾಪಾಡಿದ ಪಾಕ್‌

ಇಸ್ಲಾಮಾಬಾದ್‌: ತಾಲಿಬಾನ್‌ ಉಗ್ರರ ಗುಂಡಿನ ದಾಳಿಗೆ ಒಳಗಾದ ಐದು ವರ್ಷಗಳ ನಂತರ ಇದೇ ಮೊದಲ ಬಾರಿಗೆ ತವರು ದೇಶ ಪಾಕಿಸ್ತಾನಕ್ಕೆ ಭೇಟಿ ನೀಡಿದ ಹೋರಾಟಗಾರ್ತಿ ಮಲಾಲ ಯೂಸುಫ್‌ಜೈ ಅವರ ಕಾರ್ಯಚಟುವಟಿಕೆಗಳ ಬಗ್ಗೆ ಶುಕ್ರವಾರ ಗೋಪ್ಯತೆ ಕಾಪಾಡಲಾಗಿತ್ತು.

ಮಲಾಲ ಅವರನ್ನು ಭೇಟಿಯಾಗಬಯಸುವವರಿಗೆ ಕೂಡ ಕೊನೆಯ ಗಳಿಗೆಯವರೆಗೂ ಅವರು ಎಲ್ಲಿ ಸಿಗುತ್ತಾರೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇರಲಿಲ್ಲ. ‘ಭದ್ರತೆಯ ದೃಷ್ಟಿಯಿಂದ ಇಷ್ಟೊಂದು ರಹಸ್ಯ ಕಾಪಾಡಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದು ಟೀಕೆಗೂ ಗುರಿಯಾಗಿದೆ.

‘ನನ್ನ ತವರಿಗೆ ಮರಳಿರುವುದು ಕನಸಂತೆ ತೋರುತ್ತಿದೆ’ ಎಂದು ಟಿ.ವಿ.ಯಲ್ಲಿ ಹೇಳುವಾಗ ಮಲಾಲ ಗದ್ಗದಿತರಾದರು.

ಮಾನವ ಹಕ್ಕುಗಳ ರಕ್ಷಣೆಗಾಗಿ, ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ದುಡಿದು ವಿಶ್ವದಾದ್ಯಂತ ಮಾದರಿಯಾಗಿರುವ ಮಲಾಲ ಅವರನ್ನು ಪಾಕಿಸ್ತಾನದಲ್ಲಿ ಮಾತ್ರ ಕೆಲವರು ಕಡೆಗಣ್ಣಿನಿಂದಲೇ ನೋಡುತ್ತಿದ್ದಾರೆ. ‘ಈಕೆ ನಮ್ಮ ದೇಶವನ್ನು ಅವಮಾನಿಸುವ ಉದ್ದೇಶಕ್ಕೆ ಬಂದಿರುವ ಪಾಶ್ಚಿಮಾತ್ಯ ದಲ್ಲಾಳಿ’ ಎಂದು ಕೆಲವರು ಟೀಕಿಸಿದ್ದಾರೆ.

‘ನಮ್ಮ ಸಂಘದ ಕಾರ್ಯಕರ್ತೆಯರು ಮಲಾಲ ಅವರನ್ನು ಭೇಟಿಯಾಗಲು ಇಚ್ಛಿಸಿದ್ದೆವು. ಆದರೆ ಕೊನೆಯ ಗಳಿಗೆಯವರೆಗೂ ಅವರು ಎಲ್ಲಿ ಸಿಗುತ್ತಾರೆ ಎಂಬ ಮಾಹಿತಿ ಸಿಗಲಿಲ್ಲ’ ಎಂದು ಮಹಿಳಾ ಹೋರಾಟಗಾರ್ತಿ ನಿಗತ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry