ಆಸ್ಟ್ರೇಲಿಯಾಕ್ಕೆ ಜಯದ ವಿಶ್ವಾಸ

7

ಆಸ್ಟ್ರೇಲಿಯಾಕ್ಕೆ ಜಯದ ವಿಶ್ವಾಸ

Published:
Updated:
ಆಸ್ಟ್ರೇಲಿಯಾಕ್ಕೆ ಜಯದ ವಿಶ್ವಾಸ

ಮುಂಬೈ: ಸತತ ಜಯದ ಮೂಲಕ ವಿಶ್ವಾಸ ಹೆಚ್ಚಿಸಿಕೊಂಡಿರುವ ಆಸ್ಟ್ರೇಲಿಯಾ ಮಹಿಳೆಯರ ತಂಡ ತ್ರಿಕೋನ ಟ್ವೆಂಟಿ–20 ಸರಣಿಯ ಫೈನಲ್ ಪಂದ್ಯದಲ್ಲಿ ಪ್ರಶಸ್ತಿ ಗೆದ್ದುಕೊಳ್ಳುವ ಹುಮ್ಮಸ್ಸಿನಲ್ಲಿದೆ.

ಇಂಗ್ಲೆಂಡ್ ಎದುರು ಆಡಲಿರುವ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಬಿಲಿಷ್ಠವಾಗಿದೆ. ಈಗಾಗಲೇ ಆಸ್ಟ್ರೇಲಿಯಾ ಬಳಗ ಒಮ್ಮೆ ಇಂಗ್ಲೆಂಡ್‌ಗೆ ಸೋಲುಣಿಸಿದೆ.

ಟೂರ್ನಿಯ ಮೊದಲ ಎರಡು ಪಂದ್ಯಗಳನ್ನು ಗೆದ್ದಿದ್ದ ಇಂಗ್ಲೆಂಡ್ ತಂಡ ಬಳಿಕ ಸತತವಾಗಿ ಸೋಲು ಎದುರಿಸಿತ್ತು. ಭಾರತ ಎದುರಿನ ಪಂದ್ಯದಲ್ಲಿ ದೊಡ್ಡ ಮೊತ್ತವನ್ನು ಈ ತಂಡ ಬೆನ್ನಟ್ಟಿತ್ತು. ಆಸ್ಟ್ರೇಲಿಯಾಕ್ಕೂ ಒಮ್ಮೆ ಸೋಲಿನ ರುಚಿ ತೋರಿಸಿದೆ. ಇಂಗ್ಲೆಂಡ್ ತಂಡ ಬ್ಯಾಟಿಂಗ್‌ನಲ್ಲಿ ಡೇನಿಯೆಲ್‌ ವೈಟ್‌ ಅವರನ್ನು ನೆಚ್ಚಿಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry