ಗೋಲ್ಡ್‌ಕೋಸ್ಟ್‌ಗೆ ತೆರಳಿದ ಟಿ.ಟಿ ತಂಡ

7

ಗೋಲ್ಡ್‌ಕೋಸ್ಟ್‌ಗೆ ತೆರಳಿದ ಟಿ.ಟಿ ತಂಡ

Published:
Updated:

ನವದೆಹಲಿ: ಒಂಬತ್ತು ಸ್ಪರ್ಧಿಗಳನ್ನು ಒಳಗೊಂಡ ಭಾರತದ ಟೇಬಲ್ ಟೆನಿಸ್ ತಂಡ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಶುಕ್ರವಾರ ಗೋಲ್ಡ್‌ಕೋಸ್ಟ್‌ಗೆ ಪ್ರಯಾಣ ಮಾಡಿದೆ.

ಏಪ್ರಿಲ್‌ 4ರಿಂದ ಆಸ್ಟ್ರೇಲಿಯಾದಲ್ಲಿ ಟೂರ್ನಿ ಆರಂಭವಾಗಲಿದೆ. ಪುರುಷರ ತಂಡದ ಕೋಚ್‌ ಮಸ್ಸಿಮೊ ಕೋಸ್ಟನಿ ಮತ್ತು ಮಹಿಳೆಯರ ತಂಡದ ಕೋಚ್‌ ಸೌಮ್ಯದೀಪ್‌ ರಾಯ್‌ ಹಾಗೂ ಇಬ್ಬರು ಸಹಾಯಕ ಸಿಬ್ಬಂದಿ ಕೂಡ ತಂಡದೊಂದಿಗೆ ತೆರಳಿದ್ದಾರೆ.

ತಂಡದ ಪ್ರಮುಖ ಆಟಗಾರ ಸೌಮ್ಯ ಜಿತ್ ಘೋಷ್ ಅವರನ್ನು ಇತ್ತೀಚೆಗೆ ಕಾಮನ್‌ವೆಲ್ತ್ ಕೂಟದ ತಂಡದಿಂದ ಕೈಬಿಡಲಾಗಿತ್ತು. 18 ವರ್ಷದ ಯುವತಿಯೊಬ್ಬರು ಅತ್ಯಾಚಾರದ ಪ್ರಕರಣ ದಾಖಲಿಸಿದ್ದರಿಂದ ತಂಡದಿಂದ ಅಮಾನತು ಮಾಡಲಾಗಿತ್ತು.

ತಂಡ ಇಂತಿದೆ: ಪುರುಷರು: ಅಚಂತಾ ಶರತ್‌ ಕಮಲ್‌, ಜಿ.ಸತ್ಯನ್‌, ಅಂಥೋಣಿ ಅಮಲರಾಜ್‌, ಹರ್ಮೀತ್‌ ದೇಸಾಯಿ. ಮಹಿಳೆಯರು: ಮಾಣಿಕಾ ಬಾತ್ರಾ, ಮೌಮಾ ದಾಸ್‌, ಮಧುರಿಕಾ ಪಾಟ್ಕರ್‌, ಪೂಜಾ ಸಹಸ್ರಬುದ್ಧೆ, ಸುಚಿತ್ರಾ ಮುಖರ್ಜಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry