ನೀತಿ ಸಂಹಿತೆ ಉಲ್ಲಂಘನೆ?

7

ನೀತಿ ಸಂಹಿತೆ ಉಲ್ಲಂಘನೆ?

Published:
Updated:

ಮೈಸೂರು: 2016ರ ಮಾರ್ಚ್‌ನಲ್ಲಿ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಕ್ಯಾತಮಾರನಹಳ್ಳಿ ರಾಜು ಅವರ ಮನೆಗೆ ಭೇಟಿ ನೀಡಿದ ಅಮಿತ್‌ ಶಾ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆಯ ಆರೋಪ ಕೇಳಿ ಬಂದಿದೆ.

‘ಭೇಟಿಯ ಸಂದರ್ಭದಲ್ಲಿ ಬಿಜೆಪಿ ಮುಖಂಡರು ₹ 5 ಲಕ್ಷ ಪರಿಹಾರ ನೀಡಿದ್ದಾರೆ’ ಎಂದು ರಾಜು ಅತ್ತಿಗೆ ಕುಮಾರಿ ಬಹಿರಂಗಪಡಿಸಿದ್ದಾರೆ. ಆದರೆ, ಇದನ್ನು ಬಿಜೆಪಿ ತಳ್ಳಿಹಾಕಿದೆ.

ರಾಜು ಕುಟುಂಬದ ಸದಸ್ಯರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವ ವೇಳೆ ಮಧ್ಯಪ್ರವೇಶ ಮಾಡಿದ ಬಿಜೆಪಿ ಮುಖಂಡ ಮೈ.ಕಾ.ಪ್ರೇಮಕುಮಾರ್‌, ‘ಬಿಜೆಪಿ ರಾಜ್ಯ ಘಟಕದ ವತಿಯಿಂದ ₹ 5 ಲಕ್ಷ ಪರಿಹಾರ ನೀಡುವಂತೆ ಬಿ.ಎಸ್.ಯಡಿಯೂರಪ್ಪ ಅವರಿಗೆ ಶಾ ಸೂಚನೆ ನೀಡಿದ್ದು ನಿಜ. ಸ್ಥಳದಲ್ಲಿ ಹಣ ಅಥವಾ ಚೆಕ್‌ ವಿತರಣೆ ಮಾಡಿಲ್ಲ’ ಎಂದರು.

ಹಣ ನೀಡಿಲ್ಲ: (ಚಾಮರಾಜನಗರ)– ‘ರಾಜು ಕುಟುಂಬಕ್ಕೆ ನಾವು ಒಂದು ಪೈಸೆಯನ್ನೂ ನೀಡಿಲ್ಲ. ಆದರೂ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್ ಚುನಾವಣಾ ಆಯೋಗಕ್ಕೆ ಸುಳ್ಳು ದೂರು ನೀಡಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry