ಪ್ರತ್ಯೇಕತಾವಾದಿಗಳಿಗೆ ನಿರ್ಬಂಧ ರದ್ದು

7

ಪ್ರತ್ಯೇಕತಾವಾದಿಗಳಿಗೆ ನಿರ್ಬಂಧ ರದ್ದು

Published:
Updated:

ಶ್ರೀನಗರ: ಕಾಶ್ಮೀರದ ಪ್ರತ್ಯೇಕತಾವಾದಿಗಳ ಮೂವರು ಮುಖಂಡರ ಚಲನವಲನದ ಮೇಲಿದ್ದ ನಿರ್ಬಂಧಗಳನ್ನು ಸರ್ಕಾರ ಸುಮಾರು ಎರಡು ವರ್ಷಗಳ ನಂತರ ಗುರುವಾರ ರದ್ದುಪಡಿಸಿದೆ.

ಹುರಿಯತ್ ಕಾನ್ಫರೆನ್ಸ್‌ (ಜಿ) ಅಧ್ಯಕ್ಷ ಸೈಯದ್ ಅಲಿ ಷಾ ಗಿಲಾನಿ ಮತ್ತು ಹುರಿಯತ್ ಕಾನ್ಫರೆನ್ಸ್‌ (ಎಂ) ಅಧ್ಯಕ್ಷ ಮಿರ್ವೈಜ್ ಉಮರ್ ಫಾರೂಕ್

ಹಾಗೂ ಜಮ್ಮು ಕಾಶ್ಮೀರ ವಿಮೋಚನಾ ರಂಗದ ಮುಖ್ಯಸ್ಥ ಯಾಸಿನ್ ಮಲಿಕ್ ಅವರ ಮೇಲಿದ್ದ ನಿರ್ಬಂಧ ತೆಗೆದು ಹಾಕಲಾಗಿದ್ದು, ರಾಜಕೀಯ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ನಡೆಸಲು ಮುಕ್ತರಾಗಿದ್ದಾರೆ.

ಆದರೆ, ರಾಷ್ಟ್ರ ವಿರೋಧ ಭಾಷಣಗಳನ್ನು ಮಾಡಬಾರದು. ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರಬಾರದು ಎಂದು ರಾಜ್ಯದ ಪೊಲೀಸ್ ಮಹಾ ನಿರ್ದೇಶಕ ಎಸ್‌.ಪಿ.ವೇದ್ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry