ರಜೆ ಪಡೆಯದ ಪತಿ: 2 ತಿಂಗಳ ಗರ್ಭಿಣಿ ಆತ್ಮಹತ್ಯೆ

6

ರಜೆ ಪಡೆಯದ ಪತಿ: 2 ತಿಂಗಳ ಗರ್ಭಿಣಿ ಆತ್ಮಹತ್ಯೆ

Published:
Updated:

ಯಾದಗಿರಿ: ಪತಿ ರಜೆ ಪಡೆಯಲಿಲ್ಲ ಎನ್ನುವ ಕಾರಣಕ್ಕೆ ಬೇಸರಗೊಂಡ ಪತ್ನಿ ಶುಕ್ರವಾರ ನಗರದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ಟೇಷನ್‌ ನಗರದ ಪೂಜಾ (19) ಮೃತರು. ಇವರು 2 ತಿಂಗಳ ಗರ್ಭಿಣಿ ಎಂದು ಕುಟುಂಬದವರು ತಿಳಿಸಿದ್ದಾರೆ. ಇವರಿಗೆ ವಿವಾಹವಾಗಿ 9 ತಿಂಗಳು ಕಳೆದಿವೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಪತಿ ಆನಂದ ರಾಠೋಡ ಇಲ್ಲಿನ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಚಾಲಕರಾಗಿದ್ದಾರೆ. ಪತಿಯೊಂದಿಗೆ ಪ್ರವಾಸಕ್ಕೆ ತೆರಳುವ  ಆಸೆಯನ್ನು ಪೂಜಾ ಹೊಂದಿದ್ದರು. ಆದರೆ, ರಜೆ ಸಿಗದ ಕಾರಣ ಮುಂದಿನ ದಿನಗಳಲ್ಲಿ ರಜೆ ಪಡೆಯುವುದಾಗಿ ಆನಂದ ಪತ್ನಿಗೆ ತಿಳಿಸಿದ್ದರು. ಪತಿ ರಜೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ಎಂದು ಭಾವಿಸಿದ ಪತ್ನಿ ಅಸಮಾಧಾನಗೊಂಡು ನೇಣಿಗೆ ಶರಣಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry