ಗೃಹಿಣಿ ಆತ್ಮಹತ್ಯೆ

7

ಗೃಹಿಣಿ ಆತ್ಮಹತ್ಯೆ

Published:
Updated:

ಬೆಂಗಳೂರು: ಬೆಳ್ಳಂದೂರಿನ ಬೋವಿ ಕಾಲೊನಿಯಲ್ಲಿ ಗೃಹಿಣಿ ಮೋನಿಕಾ (23) ನೇಣು ಹಾಕಿಕೊಂಡು ಗುರುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆಂಧ್ರಪ್ರದೇಶದ ಅವರು, ಪ್ರವೀಣ್ ಎಂಬುವರನ್ನು ವಿವಾಹವಾಗಿದ್ದರು. ವರ್ಷದ ಹಿಂದೆ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ ದಂಪತಿ ಕಾಲೊನಿಯಲ್ಲಿ ನೆಲೆಸಿದ್ದರು. ಅವರಿಗೆ ಒಂದು ವರ್ಷದ ಮಗು ಇದೆ.

ಮೋನಿಕಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಮಗುವಿನ ಜತೆ ಒಬ್ಬರೇ ಇದ್ದ ಅವರು ಸಂಜೆ ಫ್ಯಾನ್‌ಗೆ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲಸಕ್ಕೆ ಹೋಗಿದ್ದ ಪತಿ ಮನೆಗೆ ಬಂದು ನೋಡಿದಾಗ ವಿಷಯ ಗೊತ್ತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry