ಕಮಲ್‌ ಹಾಸನ್‌–ಕ್ರಿಸ್ಟೋಫರ್‌ ನೊಲನ್‌ ಭೇಟಿ

7

ಕಮಲ್‌ ಹಾಸನ್‌–ಕ್ರಿಸ್ಟೋಫರ್‌ ನೊಲನ್‌ ಭೇಟಿ

Published:
Updated:
ಕಮಲ್‌ ಹಾಸನ್‌–ಕ್ರಿಸ್ಟೋಫರ್‌ ನೊಲನ್‌ ಭೇಟಿ

ಮುಂಬೈ: ಬ್ಯಾಟ್‌ ಮ್ಯಾನ್‌ ಚಿತ್ರ ಸರಣಿಯ ನಿರ್ದೇಶಕ ಕ್ರಿಸ್ಟೋಫರ್‌ ನೊಲನ್‌ ಅವರನ್ನು ಭೇಟಿಯಾದ ನಟ ಕಮಲ್‌ ಹಾಸನ್‌ ಇಬ್ಬರ ನಡುವಿನ ಮಾತುಕತೆಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ರಿಫ್ರೇಮಿಂಗ್‌ ದಿ ಫೀಚರ್‌ ಆಫ್‌ ಫಿಲಂ’ ಕಾರ್ಯಕ್ರಮದ ನಿಮಿತ್ತ ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್‌ ನೊಲನ್‌ ಮತ್ತು ವಿಷುವಲ್‌ ಆರ್ಟಿಸ್ಟ್‌ ಟಕಿಟಾ ದೀನ್‌ ಎರಡು ದಿನ ಭಾರತ ಪ್ರವಾಸಲ್ಲಿದ್ದಾರೆ.

ನಟ–ನಿರ್ದೇಶಕ ಕಮಲ್‌ ಹಾಸನ್‌ ಶನಿವಾರ ನೊಲನ್‌ ಅವರನ್ನು ಭೇಟಿಯಾಗಿದ್ದು, ‘ಅವರ ಡನ್‌ಕಿರ್ಕ್‌ ಸಿನಿಮಾವನ್ನು ಡಿಜಿಟಲ್‌ ಫಾರ್ಮ್ಯಾಟ್‌ನಲ್ಲಿ ನೋಡಿದ್ದಕ್ಕೆ ಕ್ಷಮೆಕೇಳಿ, ಅದಕ್ಕೆ ಪ್ರತಿಯಾಗಿ ಹೇ ರಾಮ್‌ ಚಿತ್ರವನ್ನು ಡಿಜಿಟಲ್‌ ಫಾರ್ಮ್ಯಾಟ್‌ನಲ್ಲಿ ಅವರಿಗಾಗಿ ಕಳುಹಿಸುತ್ತಿದ್ದೇನೆ. ಅವರು ಪಾಪನಾಸಂ ಚಿತ್ರವನ್ನು ನೋಡಿದ್ದಾರೆ ಎಂದು ತಿಳಿದು ಆಶ್ಚರ್ಯ ಉಂಟಾಯಿತು’ ಎಂದು ಟ್ವೀಟಿಸಿದ್ದಾರೆ.

ಭಾರತ ಚಿತ್ರರಂಗದ ಪ್ರಮುಖರಾದ ಅಮಿತಾಬ್‌ ಬಚ್ಚನ್‌, ಶಾರೂಕ್‌ ಖಾನ್‌, ಕಮಲ್‌ ಹಾಸನ್‌, ಶ್ಯಾಮ್‌ ಬೆನೆಗನ್‌ ಸೇರಿ ಇತರರೊಂದಿಗೆ ನೊಲನ್‌ರೊಂದಿಗೆ ಸಭೆ ಯೋಜಿಸಲಾಗಿದೆ.

ಫಿಲಂ ಹೆರಿಟೇಜ್‌ ಫೌಂಡೇಷನ್‌ನ ಸಂಸ್ಥಾಪಕ ನಿರ್ದೇಶಕರಾದ ಶಿವೇಂದರ್‌ ಸಿಂಗ್‌ ದುಂಗಾರ್‌ಪುರ್‌ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ನೊಲನ್‌ ಅವರ ಡನ್‌ಕಿರ್ಕ್ ಮತ್ತು ಇಂಟರ್‌ಸ್ಟೆಲ್ಲರ್‌ ಚಿತ್ರಗಳು ಪ್ರದರ್ಶನ ಕಾಣಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry