ದಾಖಲೆ ಇಲ್ಲದ ₹ 5.50 ಲಕ್ಷ ವಶ

7

ದಾಖಲೆ ಇಲ್ಲದ ₹ 5.50 ಲಕ್ಷ ವಶ

Published:
Updated:

 

ಚಿಕ್ಕಬಳ್ಳಾಪುರ: ನಗರ ಹೊರವಲಯದ ಚದುಲಪುರ ಕ್ರಾಸ್‌ನಲ್ಲಿ ತೆರೆದಿರುವ ಚೆಕ್‌ಪೋಸ್ಟ್‌ನಲ್ಲಿ ಶುಕ್ರವಾರ ತಪಾಸಣೆ ವೇಳೆ ಬಾಗೇಪಲ್ಲಿ ಮೂಲದ ವ್ಯಕ್ತಿಯೊಬ್ಬರಿಂದ ತಪಾಸಣಾಧಿಕಾರಿಗಳು ದಾಖಲೆ ಇಲ್ಲದ ₹ 5.50 ಲಕ್ಷ ವಶಕ್ಕೆ ಪಡೆದರು.ಸಂಜೆ 5.30ರ ಸುಮಾರಿಗೆ ದೇವನಹಳ್ಳಿ ಕಡೆಯಿಂದ ಚಿಕ್ಕಬಳ್ಳಾಪುರದತ್ತ ಹೊರಟಿದ್ದ ನಂಬರ್ ಪ್ಲೇಟ್ ಇಲ್ಲದ ಮಾರುತಿ ಸುಜುಕಿ ಸೆಲೆರಿಯೊ ಕಾರನ್ನು ಅಧಿಕಾರಿಗಳು ಚೆಕ್‌ಪೋಸ್ಟ್‌ನಲ್ಲಿ ಸಂಶಯದ ಮೇಲೆ ತಡೆದು ತಪಾಸಣೆ ನಡೆಸಿದಾಗ ದಾಖಲೆ ಇಲ್ಲದ ಹಣ ಪತ್ತೆಯಾಗಿದೆ.

‘ಕಾರಿನಲ್ಲಿ ಮೂರು ಜನರಿದ್ದರು. ಈ ಪೈಕಿ ಹಿಂಭಾಗದ ಸೀಟಿನಲ್ಲಿದ್ದ ಇಬ್ಬರು ವ್ಯಕ್ತಿಗಳ ನಡುವೆ ಇದ್ದ ಕೈಚೀಲದಲ್ಲಿ ಹಣ ಪತ್ತೆಯಾಗಿದೆ. ಕಾರಿನಲ್ಲಿದ್ದ ಬಾಗೇಪಲ್ಲಿಯ ಸುರೇಂದ್ರ ಎಂಬುವರು ಈ ಹಣ ತಮಗೆ ಸೇರಿದ್ದು ಎಂದು ಹೇಳಿದ್ದಾರೆ. ಆದರೆ ಸೂಕ್ತ ದಾಖಲೆಗಳನ್ನು ನೀಡಿಲ್ಲ’ ಎಂದು ಚುನಾವಣಾಧಿಕಾರಿ ಶಿವಸ್ವಾಮಿ ತಿಳಿಸಿದರು.’ಸದ್ಯ ಪೊಲೀಸರು ಸುರೇಂದ್ರ ಜತೆಗೆ ಕಾರಿನಲ್ಲಿದ್ದ ಅಮರನಾಥ್ ಮತ್ತು ಹರೀಶ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಹಣವನ್ನು ಜಪ್ತಿ ಮಾಡಿಕೊಳ್ಳಲಾಗಿದೆ.ನಂದಿ ಗಿರಿಧಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry