‘ಸರ್ಕಾರಿ ಶಾಲೆಗೆ ಜನಪದ ಕಲಾವಿದರ ನೇಮಿಸಿ’

7
ಕೆರೆಬಿಳಚಿ: ಸ್ಮಾರ್ಟ್ ಕ್ಲಾಸ್‌ ತಂತ್ರಜ್ಞಾನ ಬಳಸಿ ಬೋಧನೆ

‘ಸರ್ಕಾರಿ ಶಾಲೆಗೆ ಜನಪದ ಕಲಾವಿದರ ನೇಮಿಸಿ’

Published:
Updated:

ಹರಪನಹಳ್ಳಿ: ಜಾನಪದ ಪರಂಪರೆ ಉಳಿವುದಕ್ಕಾಗಿ ಕಲಾವಿದರನ್ನು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರನ್ನಾಗಿ ನೇಮಿಸಬೇಕು ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯೆ ಮರಿಯಮ್ಮನಹಳ್ಳಿ ಬಿ. ನಂಜಮ್ಮ ಜೋಗಿತಿ ಒತ್ತಾಯಿಸಿದರು.ಪಟ್ಟಣದ ನಟರಾಜ ಕಲಾಭವನದಲ್ಲಿ ಕರ್ನಾಟಕ ರಾಜ್ಯ ಬುಡಗ ಜಂಗಮ ಕ್ಷೇಮಾಭಿವೃದ್ಧಿ ಸಂಘ ಹಾಗೂ ಹಗಲುವೇಷ ಕಲಾ ತಂಡ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಗುರುವಾರ ಏರ್ಪಡಿಸಿದ್ದ ‘ಜನಪದ ಉತ್ಸವ ಹಾಗೂ ಹಗಲುವೇಷ ಉತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರ ನೀಡುತ್ತಿರುವ ಮಾಸಾಶನ ಕಡಿಮೆಯಿದ್ದು, ಕಲಾವಿದರ ಜೀವನ ನಿರ್ವಹಣೆಗೆ ತೊಂದರೆಯಾಗಿದೆ. ಅಲ್ಲದೇ ಸಕಾಲಕ್ಕೆ ಸಿಗುತ್ತಿಲ್ಲ. ಕಲೆ ಹಾಗೂ ಕಲಾವಿದರು ಉಳಿಯಬೇಕೆಂದರೆ ಸರ್ಕಾರಿ ಶಾಲೆಗಳಲ್ಲಿ ಜನಪದ ಕಲಾವಿದರನ್ನು ನೇಮಿಸಬೇಕು. ತಾಲ್ಲೂಕಿನಲ್ಲಿ ಹಗಲುವೇಷ ಕಲೆ ಉಳಿಸಿಕೊಂಡು ಬರಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು, ತರಬೇತಿ ನೀಡಲು ಸಾಂಸ್ಕೃತಿಕ ಭವನ ನಿರ್ಮಿಸಬೇಕು ಎಂದು ಒತ್ತಾಯಿಸಿದರು. ಸಾನ್ನಿಧ್ಯ ವಹಿಸಿದ್ದ ತೆಗ್ಗಿನಮಠದ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಪ್ರತಿ ತಿಂಗಳು ಕಲಾವಿದರ ಉತ್ಸವ ನಡೆಸಬೇಕು. ಹಗಲುವೇಷ ಕಲೆ ದಾವಣಗೆರೆ, ಬಳ್ಳಾರಿಯಲ್ಲಿ ಮಾತ್ರ ಕಂಡುಬರುತ್ತದೆ. ಕಲೆಗೆ ಹಣ ನೀಡಿ, ಬೆಲೆ ಕಟ್ಟಲಾಗದು. ಹೊಟ್ಟೆಪಾಡಿಗೆ ವೇಷಹಾಕಿಕೊಂಡು ಹಿರಿಯರ ಪರಂಪರೆ ಜೀವಂತವಾಗಿಸಲು ಶ್ರಮಿಸುತ್ತಿರುವ ಕಲಾವಿದರ ಕಾರ್ಯ ಶ್ಲಾಘನೀಯ’ ಎಂದರು.

ಉಪನ್ಯಾಸ ನೀಡಿದ ಸಾಹಿತಿ ಇಸ್ಮಾಯಿಲ್ ಎಲಿಗಾರ, ‘ಜನಪದ ಕಲೆ ಭಾರತೀಯ ಸಂಸ್ಕೃತಿಯ ಮೂಲಬೇರು. ಕಲಾವಿದರು ಸಾಂಸ್ಕೃತಿಕ ರಾಯಭಾರಿಗಳು. ಇಂದಿನ ಯುವ ಪಿಳಿಗೆಗೆ ನಮ್ಮ ಪರಂಪರೆ ಸಾರುವ ಅನುಭವಜನ್ಯ ಪ್ರತಿಭೆ ಕಲಾವಿದರಲ್ಲಿ ಅಡಕವಾಗಿದೆ. ಸರ್ಕಾರ ಪ್ರಾಥಮಿಕ ಶಾಲೆಗಳ ಪಠ್ಯ-ಪುಸ್ತಕದಲ್ಲಿ ಪ್ರದರ್ಶಕ ಕಲೆಗಳ ಬಗ್ಗೆ ಪಾಠಗಳನ್ನು ಅಳವಡಿಸಬೇಕು’ ಎಂದು ಒತ್ತಾಯಿಸಿದರು.ಉಪನ್ಯಾಸಕ ಎಚ್.ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸಿದ್ದರು. ಎಂ.ಮಾರುತಿ ಮತ್ತು ಸಂಗಡಿಗರು ಕಲಾ ಪ್ರದರ್ಶನ ನೀಡಿದರು.ಹಾದಿಮನಿ ನಾಗರಾಜ, ಚಿನ್ನಸಮುದ್ರದ ಸಿ.ಎಚ್. ಉಮೇಶ್ ಅವರಿಂದ ಜನಪದ ಹಾಡು, ಹಗಲುವೇಷ, ಸಂಗೀತ ಕಾರ್ಯಕ್ರಮ ನಡೆದವು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ರವೀಂದ್ರ ಅಧಿಕಾರ, ಡಾ. ಸಂಗೀತಾ, ನಿಚ್ಚನಹಳ್ಳಿ ಭೀಮಪ್ಪ, ಜಂಗಮ ತಾಲ್ಲೂಕು ಅಧ್ಯಕ್ಷ ಬಿ.ಎ. ರಾಮಣ್ಣ, ವೆಂಕಟೇಶಪ್ಪ, ವೇಷಗಾರ ಮೊತಿ ಮಾರುತಿ, ಬಾಗಳಿ ಶಿವಕುಮಾರ, ಶಿಲ್ಪಾಗೌಡರ, ಶ್ವೇತಾ, ಆರ್.ಗಿರೀಶ್, ಮೋತಿ ರಾಮಣ್ಣ ಅವರೂ ಇದ್ದರು.

**

ಜಾನಪದ ಪರಂಪರೆ ಉಳಿವುದಕ್ಕಾಗಿ ಕಲಾವಿದರನ್ನು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರನ್ನಾಗಿ ನೇಮಿಸಬೇಕು ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯೆ ಮರಿಯಮ್ಮನಹಳ್ಳಿ ಬಿ. ನಂಜಮ್ಮ ಜೋಗಿತಿ ಒತ್ತಾಯಿಸಿದರು.

**

ಸರ್ಕಾರಿ ಶಾಲಾ ಶಿಕ್ಷಕರಲ್ಲಿ ಅರ್ಪಣಾ ಮನೋಭಾವವಿದ್ದರೆ ಖಾಸಗಿ ಶಾಲೆಗಳನ್ನು ಮೀರಿಸುವ ಶಿಕ್ಷಣ ನೀಡಬಹುದು – ಅತಾ, ಅಯಾಜ್. ಶಿಕ್ಷಕರು.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry