ಘಾಟಿಯಲ್ಲಿ ವಾಹನ ದಟ್ಟಣೆ: ಪರದಾಟ

7

ಘಾಟಿಯಲ್ಲಿ ವಾಹನ ದಟ್ಟಣೆ: ಪರದಾಟ

Published:
Updated:
ಘಾಟಿಯಲ್ಲಿ ವಾಹನ ದಟ್ಟಣೆ: ಪರದಾಟ

ಮೂಡಿಗೆರೆ: ಸಾಲು– ಸಾಲು ರಜೆಗಳ ಹಿನ್ನೆಲೆಯಲ್ಲಿ ಚಾರ್ಮಾಡಿಘಾಟಿಯಲ್ಲಿ ವಾಹನದಟ್ಟಣೆ ಹೆಚ್ಚಾಗಿದ್ದು, ಶುಕ್ರವಾರ ರಾತ್ರಿ 2 ಗಂಟೆಗೂ ಅಧಿಕ ಕಾಲ ಸಂಚಾರ ವ್ಯತ್ಯಯವಾಗಿತ್ತು.

ಗುರುವಾರದಿಂದಲೇ ತಾಲ್ಲೂಕಿನಲ್ಲಿ ಪ್ರವಾಸಿ ವಾಹನಗಳ ಸಂಖ್ಯೆ ಹೆಚ್ಚಳವಾಗಿದ್ದು, ಶುಕ್ರವಾರ ಇಡೀ ದಿನ ವಾಹನಗಳ ಸಂಚಾರ ದಟ್ಟಣೆಯಿತ್ತು. ಸಂಜೆಯ ವೇಳೆಗೆ ಕರಾವಳಿಯ ಕಡೆಗೆ ಏಕಾಏಕಿ ವಾಹನಗಳು ಹರಿದು ಬಂದಿದ್ದರಿಂದ ರಾಷ್ಟ್ರೀಯ ಹೆದ್ದಾರಿ 234 ರ ಚಾರ್ಮಾಡಿಘಾಟಿಯಲ್ಲಿ ವಾಹನ ದಟ್ಟಣೆ ಹೆಚ್ಚಳವಾಗಿತ್ತು.

ವಾಹನ ದಟ್ಟಣೆಯ ನಡುವೆಯೇ ಘಾಟಿಯಲ್ಲಿ ಘನ ವಾಹನಗಳು ಸಂಚರಿಸಿದ್ದರಿಂದ, ತಿರುವುಗಳಲ್ಲಿ ಘನವಾಹನಗಳು ತಿರುಗಲಾಗದೇ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು. ವಾಹನ ಸವಾರರೇ ಟ್ರಾಫಿಕ್‌ಜಾಮ್‌ ಸರಿಪಡಿಸಿಕೊಂಡು ಸಾಗುತ್ತಿದ್ದ ದೃಶ್ಯ ಕಂಡು ಬಂದಿತು.

ಸುಮಾರು ಎರಡು ಗಂಟೆಗಳ ಘಾಟಿಯಲ್ಲಿ ಕಳೆದ ಬಸ್‌ ಪ್ರಯಾಣಿಕರು, ವಾಹನ ಸವಾರರು, ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕಿ ತೆರಳಿದರು. ರಾತ್ರಿ 10 ರ ಸುಮಾರಿಗೆ ವಾಹನಗಳ ಸಂಖ್ಯೆ ಇಳಿಮುಖವಾಗಿದ್ದರಿಂದ ಸಂಚಾರ ಸಹಜ ಸ್ಥಿತಿಗೆ ಮರಳಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry