ಟೂರ್ನಿ; ವಸಂತ ಪೂಜಾರಿ ತಂಡ ಪ್ರಥಮ

7
ವಸಂತಪೂಜಾರಿ ತಂಡ ಪ್ರಥಮ

ಟೂರ್ನಿ; ವಸಂತ ಪೂಜಾರಿ ತಂಡ ಪ್ರಥಮ

Published:
Updated:

ಸೋಮವಾರಪೇಟೆ: ಸಮೀಪದ ಕೆಂಚಮ್ಮನಬಾಣೆಯ ಆದಿ ನಾಗಬ್ರಹ್ಮ ಮೋಗ್ಗೇರ್ಕಳ ಯುವಕ ಸಂಘ ಆಯೋಜಿಸಿದ್ದ 2ನೇ ವರ್ಷದ ರಾಜ್ಯಮಟ್ಟದ ಪುರುಷರ ಮುಕ್ತ ಕಬಡ್ಡಿ ಟೂರ್ನಿಯಲ್ಲಿ ವಸಂತಪೂಜಾರಿ ತಂಡ ಪ್ರಥಮ ಹಾಗೂ ಮಂಜೂರು ತಮ್ಮಣ್ಣಿ ತಂಡ ದ್ವಿತೀಯ ಸ್ಥಾನ ಪಡೆದವು.ಪಂದ್ಯದ ಮೊದಲರ್ಧ 7 ಪಾಯಿಂಟ್‌ಗಳ ಹಿಂದಿದ್ದ ವಸಂತ ಪೂಜಾರಿ ತಂಡ ಅಂತಿಮ ಹಂತದ ಹಣಾಹಣಿಯಲ್ಲಿ 3 ಪಾಯಿಂಟ್‌ಗಳನ್ನು ಪಡೆದು ವಿಜಯಿಯಾಯಿತು.₹ 30,000 ನಗದನ್ನು ವಸಂತ ಪೂಜಾರಿ ತಂಡ ಪಡೆದರೆ, ಮಂಜೂರು ತಮ್ಮಣ್ಣಿ ತಂಡ ₹ 15,000 ನಗದು ಪಡೆಯಿತು. ತೃತೀಯ ಹಾಗೂ ಚತುರ್ಥ ಬಹುಮಾನವನ್ನು ಕುಶಾಲನಗರದ ಹೊಟೆಲ್‌ಮಿಸ್ಟರ್ ಕೋರ್ಟ್ಸ್‌ ತಂಡ ಹಾಗೂ ಬಿಎಂಎಸ್ಎಸ್ ಬಿ ತಂಡಗಳು ಗಳಿಸಿದವು.

ಟೂರ್ನಿಯಲ್ಲಿ ಉತ್ತಮ ದಾಳಿಕಾರ ನಾಗಿ ಮಂಜೂರು ತಮ್ಮಣ್ಣಿ ತಂಡದ ಮಿಥುನ್, ಉತ್ತಮ ಹಿಡಿತಗಾರನಾಗಿ ವಸಂತ ಪೂಜಾರಿ ತಂಡದ ಸ್ವಾಮಿ, ಸರ್ವೋತ್ತಮ ಆಟಗಾರನಾಗಿ ಹೋಟೆಲ್ ಮಿನಿಸ್ಟರ್ ಕೋರ್ಟ್ಸ್‌ ತಂಡದ ಆದರ್ಶ್‌ ಬಹುಮಾನ ಪಡೆದರು.17 ವರ್ಷದೊಳಗಿನ ವಿದ್ಯಾರ್ಥಿ ಗಳಿಗಾಗಿ ಆಯೋಜಿಸಿದ್ದ ಬಾಲಕರ ಕಬಡ್ಡಿ ಟೂರ್ನಿಯಲ್ಲಿ ತೋಳೂರು ಶೆಟ್ಟಳ್ಳಿಯ ಮೊಗೇರಾ ಕ್ಷೇಮಾಭಿವೃದ್ಧಿ ಸಂಘದ ತಂಡ ಪ್ರಥಮ ಸ್ಥಾನ ಗಳಿಸಿದರೆ, ಕೋವರ್‌ಕೊಲ್ಲಿ ಸೆವೆನ್ ವಾರಿಯರ್ಸ್ ತಂಡ ದ್ವಿತೀಯ ಸ್ಥಾನ ಪಡೆಯಿತು. ತೀರ್ಪುಗಾರರಾಗಿ ದೈಹಿಕ ಶಿಕ್ಷಣ ಶಿಕ್ಷಕ ಕೂಡಿಗೆಯ ಎ.ಎಂ.ಆನಂದ್, ಗೌಡಳ್ಳಿಯ ಪ್ರವೀಣ್, ಬೇಳೂರಿನ ಎಚ್.ಬಿ.ಕೃಷ್ಣಪ್ಪ, ಹಂಡ್ಲಿಯ ಕೃಷ್ಣಪ್ಪ, ಕೂಡ್ಲೂರಿನ ಚೇತನ್ ಹಾಗೂ ಕುಸುಬೂರಿನ ಉಲ್ಲಾಸ್‌ ಕಾರ್ಯನಿರ್ವಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry