ಸಿಬಿಎಸ್ಇ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ: ಜಾರ್ಖಂಡ್‌, ಬಿಹಾರದಲ್ಲಿ ಮೂವರು ಆರೋಪಿಗಳ ಬಂಧನ

7

ಸಿಬಿಎಸ್ಇ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ: ಜಾರ್ಖಂಡ್‌, ಬಿಹಾರದಲ್ಲಿ ಮೂವರು ಆರೋಪಿಗಳ ಬಂಧನ

Published:
Updated:
ಸಿಬಿಎಸ್ಇ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ: ಜಾರ್ಖಂಡ್‌, ಬಿಹಾರದಲ್ಲಿ ಮೂವರು ಆರೋಪಿಗಳ ಬಂಧನ

ಜಾರ್ಖಂಡ್‌: ಸಿಬಿಎಸ್ಇ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಛಾತ್ರ ಪೊಲೀಸರು 3 ಮಂದಿಯನ್ನು ಬಂಧಿಸಿದ್ದು, 9 ಅಪ್ರಾಪ್ತರನ್ನು ವಶಕ್ಕೆ ಪಡೆದಿದ್ದಾರೆ.

ದೆಹಲಿ ಹಾಗೂ ಹರಿಯಾಣದಿಂದ ಸಿಬಿಎಸ್‌ಇ 10 ಮತ್ತು 12ನೇ ತರಗತಿ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿರುವ ಬಗ್ಗೆ ತನಿಖೆ ಆರಂಭಿಸಲಾಗಿತ್ತು. ಶನಿವಾರ ಈ ಎರಡು ರಾಜ್ಯಗಳಿಂದ ಹೊರಗೆ ‘ಸ್ಟಡಿ ವಿಷನ್‌’ ತರಬೇತಿ ಕೇಂದ್ರದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಒಬ್ಬನನ್ನು ಜಾರ್ಖಂಡ್‌ನಲ್ಲಿ ಹಾಗೂ ಇಬ್ಬರು ಆರೋಪಿಗಳನ್ನು ಬಿಹಾರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತನೇ ತರಗತಿಯ ಒಂಬತ್ತು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಛಾತ್ರಾದ ಎಸ್‌ಪಿ ಮಾಹಿತಿ ನೀಡಿದರು.

ವಿಶೇಷ ತನಿಖಾ ತಂಡ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ತನಿಖೆ ಮುಂದುವರಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry