ಸ್ವಾಮೀಜಿ ವಿರುದ್ಧ ಹೋರಾಟ ಹಿಂದಕ್ಕೆ

7

ಸ್ವಾಮೀಜಿ ವಿರುದ್ಧ ಹೋರಾಟ ಹಿಂದಕ್ಕೆ

Published:
Updated:

 

ಗಂಗಾವತಿ: ಅನೈತಿಕ ಸಂಬಂಧ ಆರೋಪ ಹೊತ್ತಿರುವ ಇಲ್ಲಿನ ಕಲ್ಲುಮಠದ ಡಾ.ಕೊಟ್ಟೂರು ಸ್ವಾಮೀಜಿ ವಿರುದ್ಧ ಪೀಠತ್ಯಾಗಕ್ಕೆ ಒತ್ತಾಯಿಸಿ ಎರಡು ತಿಂಗಳಿಂದ ಹೋರಾಟ ಸಮಿತಿ ನಡೆಸುತ್ತಿರುವ ಧರಣಿಯನ್ನು ಶುಕ್ರವಾರ ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದರು.ಹೋರಾಟ ಸಮಿತಿ ಸಂಚಾಲಕ ಅಶೋಕಸ್ವಾಮಿ ಹೇರೂರು ಮಾತನಾಡಿ, ಚುನಾವಣೆ ಕಾರಣ ಪೊಲೀಸ್ ಅಧಿಕಾರಿಗಳು ಧರಣಿ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ. ಹೀಗಾಗಿ ತಾತ್ಕಾಲಿಕವಾಗಿ ಧರಣಿ ಕೈಬಿಡಲು ಸಮಿತಿಯ ಎಲ್ಲ ಸದಸ್ಯರು ತೀರ್ಮಾನಿಸಿದ್ದಾರೆ. ಚುನಾವಣೆ ಬಳಿಕ ಮತ್ತೆ ಧರಣಿ ಆರಂಭಿಸಲಾಗುವುದು ಎಂದರು.

ನಗರಸಭೆ ಸದಸ್ಯ ರಾಚಪ್ಪ ಸಿದ್ದಾಪುರ, ಪ್ರಮುಖರಾದ ಶಂಕರಗೌಡ ಹೊಸಳ್ಳಿ, ಓ.ಎಂ. ಬೊಳ್ಳೊಳ್ಳಿ, ಎಚ್.ಮಲ್ಲಿಕಾರ್ಜುನ, ಪೂಲಭಾವಿ ಸಂಗಪ್ಪ, ಶರಣೇಗೌಡ ಮಾಲಿ ಪಾಟೀಲ್,ಅರಳಿ ಮಲ್ಲಪ್ಪ, ವಲ್ಕಂದಿನ್ನಿ ಮಲ್ಲಿಕಾರ್ಜುನ, ಬಸವರಾಜ ಸಿದ್ದಾಪೂರ, ಡಾ. ಗುರುಮೂರ್ತಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry