ಪುಟ್ಟ ಪುಟ್ಟಿ ರಜೆಯ ಮಜಾ

6

ಪುಟ್ಟ ಪುಟ್ಟಿ ರಜೆಯ ಮಜಾ

Published:
Updated:
ಪುಟ್ಟ ಪುಟ್ಟಿ ರಜೆಯ ಮಜಾ

ನಾವು ಮಾಡುವೆವು ಮಜಾ

ದಿನವೂ ಶಾಲೆಯ ಪಠ

ಇಂದು ಮಾಡುವೆವು ಟಾಟಾ

ರಜೆಯ ಮಜಾ ಮಾಡಲು

ಅಜ್ಜಿಯ ಮನೆಗೆ ಹೋಗಲು

ರಜಾ ಬಂತು ರಜಾ!

ಹಳ್ಳಿಯ ತೋಟಕೆ ಹೋಗುವೆವು

ಬಗೆ ಬಗೆ ಹಣ್ಣನು ತಿನ್ನುವೆವು

ಮರಕೋತಿ ಮೈಸೂರ್ ಚಂಡು ಚಿನ್ನಿದಾಂಡು

ಆಡಲು ಬರುವರು ಅಣ್ಣನ ಗೆಳೆಯರ ದಂಡು

ನಾನು ಕುಣಿಯುವೆ ಎಲ್ಲರ‌ ಕಂಡು

ರಜಾ ಬಂತು ರಜಾ

ನಾವು ಮಾಡುವೆವು ಮಜಾ!

ತಾತನು ಕೊಟ್ಟರೆ ಚಿಲ್ಲರೆ ಕಾಸು

ನಾವು ಕೊಳ್ಳುವೆವು ಮಿಠಾಯಿ ಪೀಸು

ಮುದ್ದಿನ ಅಜ್ಜಿಯ ಕೈತುತ್ತು

ಗಬಗಬ ತಿನ್ನುವೆವು ನಾವಂತು

ಅಜ್ಜಿ ಹೇಳುವಳು ಕತೆಯನ್ನು

ಮಜದಿ ಕೇಳುವೆವು ನಾವದನು

ರಜಾ ಬಂತು ರಜಾ

ನಾವು ಮಾಡುವೆವು ಮಜಾ!

ಮುಂಜಾನೆ ಕೋಳಿಯ ಕೂಗೆ ಗಡಿಯಾರ

ನಗುನಗುತ ಬರುವ ರವಿಯು ಸುಂದರ

ಅಜ್ಜಿ ಹಾಕುವಳು ರಂಗಿನ ರಂಗೋಲಿ

ಹಾಡುತ ಕೂರುವಳು ದೇವರ ಮನೆಯಲ್ಲಿ

ಈ ಸಲದ ರಜದ ಮಜದ ನಡುವಲ್ಲಿ

ನಾನು ಕಲಿಯಬೇಕು‌ ಹಾಡು ರಂಗೋಲಿ!

ರಜಾ ಬಂತು ರಜಾ

ನಾವು ಮಾಡುವೆವು ರಜಾ!

ಆಗಾಗ ಬರುತಲಿರಲಿ ರಜಾ

ಸಾಗುತಲಿರಲಿ ಹೀಗೆಯೇ ನಮ್ಮಯ ಮಜಾ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry