300ಕ್ಕೂ ಹೆಚ್ಚು ತಿಮಿಂಗಿಲ ಬೇಟೆಯಾಡಿದ ಜಪಾನ್

7

300ಕ್ಕೂ ಹೆಚ್ಚು ತಿಮಿಂಗಿಲ ಬೇಟೆಯಾಡಿದ ಜಪಾನ್

Published:
Updated:
300ಕ್ಕೂ ಹೆಚ್ಚು ತಿಮಿಂಗಿಲ ಬೇಟೆಯಾಡಿದ ಜಪಾನ್

ಟೋಕಿಯೊ: ಅಂಟಾರ್ಟಿಕ ಸಾಗರದಲ್ಲಿ ತಿಮಿಂಗಿಲ ಬೇಟೆಗಾಗಿ ತೆರಳಿದ್ದ ಜಪಾನಿನ ಹಡಗುಗಳು 300ಕ್ಕೂ ಹೆಚ್ಚು ತಿಮಿಂಗಿಲಗಳ ಸಹಿತ ಶನಿವಾರ ಬಂದರಿಗೆ ಮರಳಿವೆ.

ಈ ಸಂದರ್ಭದಲ್ಲಿ ತಿಮಿಂಗಿಲ ಬೇಟೆ ವಿರೋಧಿ ಪ್ರತಿಭಟನಾಕಾರರಿಂದ ಯಾವುದೇ ಪ್ರತಿಭಟನೆ ಎದುರಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾಗತಿಕ ವಿರೋಧದ ನಡುವೆಯೂ ಸಂಶೋಧನೆಗಾಗಿ ತಿಮಿಂಗಿಲ ಹಿಡಿಯುವ ಸಲುವಾಗಿ ಟೋಕಿಯೊದ ಐದು ಹಡಗುಗಳು ಕಳೆದ ನವೆಂಬರ್‌ನಲ್ಲಿ ದಕ್ಷಿಣ ಸಾಗರದಲ್ಲಿ ಯಾನ ಕೈಗೊಂಡಿದ್ದವು. ಮುಖ್ಯ ಹಡಗು ‘ನಿಶಿನ್‌ ಮರು’ ಸಹಿತ ಮೂರು ಹಡಗುಗಳು ಶನಿವಾರ ಮುಂಜಾನೆ ಪಶ್ಚಿಮ ಜಪಾನ್‌ನ ಶಿಮೊನೊಸೆಕಿ ಬಂದರಿಗೆ ಬಂದಿವೆ.

ಜಪಾನಿನ ತಿಮಿಂಗಿಲ ಬೇಟೆಗಾರರು ಮತ್ತು ಪ್ರಾಣಿ ಹಕ್ಕುಗಳ ಪ್ರತಿಪಾದಕರ ನಡುವೆ ಹಿಂದೆ ಘರ್ಷಣೆ ನಡೆದಿತ್ತು. ಮುಖ್ಯವಾಗಿ ‘ಸೀ ಶೆಫರ್ಡ್‌’ ಪ್ರತಿಭಟನಾಕಾರರ ಗುಂಪು ತಿಮಿಂಗಿಲ ಬೇಟೆಗೆ ತೀವ್ರ ಪ‍್ರತಿರೋಧ ವ್ಯಕ್ತಪಡಿಸಿತ್ತು. ಇವುಗಳನ್ನು ಬೇಟೆಯಾಡುವುದರ ಕುರಿತ ನಿಷೇಧಕ್ಕೆ ಜಪಾನ್‌ ಸಹಿ ಹಾಕಿದೆ. ಆದರೆ, ಸಂಶೋಧನೆಗಾಗಿ ಬೇಟೆಯಾಡಬಹುದು ಎಂಬ ವಿನಾಯಿತಿ ಇದೆ. ಅದನ್ನು ವೈಜ್ಞಾನಿಕ ಸಂಶೋಧನೆಯ ಹೆಸರಿನಲ್ಲಿ ಜಪಾನ್‌ ಬಳಸಿಕೊಳ್ಳುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry